ಇಟಲಿಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಕನ್ನಡಿಗ: ಆರೋಗ್ಯ ವಿಚಾರಿಸಿದ ಬಿಎಸ್ವೈ - carona disease
🎬 Watch Now: Feature Video
ಇಟಲಿಯಲ್ಲಿ ಕೋವಿಡ್-19 ರೋಗಿಗಳಿಗೆ ಸೇವೆ ಸಲ್ಲಿಸುತ್ತಿರುವ ಕನ್ನಡಿಗ ಹೆಮೆಗೌಡ ಅವರ ಆರೋಗ್ಯವನ್ನು ಸಿಎಂ ಬಿ.ಎಸ್.ಯಡಿಯೂರಪ್ಪ ವಿಚಾರಿಸಿದ್ದಾರೆ. ಇದಕ್ಕೆ ಧನ್ಯವಾದ ತಿಳಿಸಿರುವ ಹೆಮೆಗೌಡ, ವಿಶ್ವ ದಾದಿಯರ ದಿನದಂದು ಸಿಎಂ ನನ್ನ ಆರೋಗ್ಯ ವಿಚಾರಿಸಿರುವುದು ಸಂತಸ ತಂದಿದೆ ಎಂದಿದ್ದಾರೆ. ಇದೇ ವೇಳೆ ಹೆಮೆಗೌಡ ಅವರು ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ ಸಮರ್ಪಕ ಪಿಪಿಇ ಕಿಟ್ ನೀಡುವಂತೆ ಮತ್ತು ಸಾರ್ವಜನಿಕರಿಗೆ ಸಾಮಾಜಿಕ ಅಂತರ ಹಾಗೂ ಕೈ ತೊಳೆಯುವ ಬಗ್ಗೆ ಅರಿವು ಮೂಡಿಸಬೇಕೆಂದು ಸಿಎಂಗೆ ಮನವಿ ಮಾಡಿಕೊಂಡಿದ್ದಾರೆ.