‘ನಮಗೆ ಯುದ್ಧಬೇಡ, ಶಾಂತಿ ಬೇಕು’... ಶಾಂತಿ ಮಂತ್ರ ಜಪಿಸಿದ ಹುತಾತ್ಮ ಯೋಧನ ಪತ್ನಿ! - pulwama martyred jawan wife reaction,
🎬 Watch Now: Feature Video
ಖಾಲಿ ಬಿಟ್ಟ ಸ್ಥಳ ತುಂಬಲು ಸಾಧ್ಯವಿಲ್ಲ. ಆತನೆಂದ್ರೆ ನನಗೆ ತುಂಬಾ ಇಷ್ಟ. ಆತನ ಮೇಲಿನ ಪ್ರೀತಿಯಿಂದ ನಾನು ಯುದ್ಧ ಬಯಸುವುದಿಲ್ಲ. ಯುದ್ಧ ಅಂದರೆ ಅದು ಮಾನವ ಸಂಪನ್ಮೂಲಗಳ ನಷ್ಟ ಮಾತ್ರ ಎಂದು ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಬಬ್ಲು ಸಂತಾರ್ ಅವರ ಪತ್ನಿ ಮಿತಾ ಸಂತಾರ್ ಅಭಿಪ್ರಾಯವಿದು. ಎಲ್ಲರೂ ತಮ್ಮ ಭರವಸೆ ಉಳಿಸಿಕೊಂಡಿದ್ದಾರೆ. ಶಾಂತಿಯುತ ಸಹಬಾಳ್ವೆ ಸಮಾಜಕ್ಕೆ ಒಳ್ಳೆಯದು, ಯುದ್ಧ ಆದ್ರೆ ಅದು ನಮಗೆ ನಷ್ಟ. ಪ್ರತಿಯೊಬ್ಬರು ಬದುಕುವ ರೀತಿಯಲ್ಲಿಯೇ ನಾನು ಬದುಕುತ್ತೇನೆ. ಸೈನ್ಯಕ್ಕಾಗಿ ನಾನು ಮುಂದುವರಿಯುವುದಿಲ್ಲ. ಯುವಕರು ದೇಶದ ಕೆಲಸಕ್ಕೆ ಸೇರಬೇಕು. ಸೈನಿಕರ ಸುರಕ್ಷತೆಯನ್ನು ರಕ್ಷಣಾ ಇಲಾಖೆ ಹೆಚ್ಚಿಸಬೇಕು ಎಂದು ಅವರು ಮನವಿ ಮಾಡಿದರು.