Watch : ಹೆಂಡ್ತಿಯನ್ನ ಕಳುಹಿಸಿಲ್ಲವೆಂದು 60 ಅಡಿ ಎತ್ತರದ ನೀರಿನ ಟ್ಯಾಂಕ್ನಿಂದ ಜಿಗಿದ 'ಗಂಡ'ಗಲಿ - suicide attempt news
🎬 Watch Now: Feature Video
ಶಿಯೋಪುರ್(ಮಧ್ಯಪ್ರದೇಶ): ಕಳೆದೆರಡು ತಿಂಗಳಿನಿಂದ ಪತ್ನಿ ಮನೆಯಲ್ಲೇ ವಾಸವಿದ್ದ ಗಣೇಶ್ ಎಂಬ ವ್ಯಕ್ತಿ, ಹೆಂಡತಿಯನ್ನ ತನ್ನ ಮನೆಗೆ ಕರೆದುಕೊಂಡು ಹೋಗಲು ಅತ್ತೆ-ಮಾವ ಬಿಟ್ಟಿಲ್ಲವೆಂದು 60 ಅಡಿ ಎತ್ತರದ ನೀರಿನ ಟ್ಯಾಂಕ್ನಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮಧ್ಯಪ್ರದೇಶದ ಶಿಯೋಪುರ್ನಲ್ಲಿ ಈ ಘಟನೆ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.