ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಬಲಾಢ್ಯರ ಸಮಾಗಮ: ಕುತೂಹಲಕಾರಿ ವಿಡಿಯೋ

🎬 Watch Now: Feature Video

thumbnail

By

Published : Jul 21, 2020, 2:58 PM IST

ಸಾಮಾನ್ಯವಾಗಿ ಅರಣ್ಯ ಪ್ರದೇಶಗಳಲ್ಲಿ ಹುಲಿ-ಹೆಬ್ಬಾವು ಮುಖಾಮುಖಿಯಾಗುವ ವೇಳೆ ದೊಡ್ಡ ಕಾಳಗವೇ ನಡೆದು ಬಿಡುತ್ತದೆ. ಇಂಥ ಘಟನೆಗಳಿಗೆ ಸಾಕಷ್ಟು ನಿದರ್ಶನಗಳು ದೊರೆತಿವೆ. ಆದ್ರೆ, ನಾಗರಹೊಳೆ ರಾಷ್ಟ್ರೀಯ ಉದ್ಯಾನ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದ ಘಟನೆ ಇದಕ್ಕೆ ತದ್ವಿರುದ್ಧ!. ಅಭಯಾರಣ್ಯದಲ್ಲಿ ಹುಲಿ ಹಾಗೂ ಬೃಹತ್​ ಗಾತ್ರದ ಹೆಬ್ಬಾವು ದಿಢೀರ್​ ಮುಖಾಮುಖಿಯಾಗಿವೆ. ಕಾಡಿನ ಮಧ್ಯೆ ಹುಲಿರಾಯ ಹೋಗುತ್ತಿದ್ದಾಗ ದಾರಿಯಲ್ಲಿ ಬೃಹತ್​ ಗಾತ್ರದ ಹೆಬ್ಬಾವು ಅಡ್ಡಲಾಗಿ ಮಲಗಿತ್ತು. ಈ ವೇಳೆ ಎರಡೂ ವನ್ಯಮೃಗಗಳು ಪರಸ್ಪರ ಕಾಳಗಕ್ಕಿಳಿಯದೆ ತಮ್ಮಷ್ಟಕ್ಕೆ ತಾವು ಸುಮ್ಮನಾಗಿವೆ. ಹುಲಿ ನಿಧಾನವಾಗಿ ಪೊದೆಯೊಳಗಿಂದ ಮುಂದೆ ಹೋಗಿದೆ. ಭಾರತೀಯ ಅರಣ್ಯ ಸೇವೆಗಳ(IFS) ಅಧಿಕಾರಿ ಸುಶಾಂತ್​ ನಂದಾ ಅವರು ಈ ಕುತೂಹಲಕಾರಿ ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.