ಸಮುದ್ರದ ಅಪರೂಪದ ಜೀವಿ... ಇದು ಯಾವ ಪ್ರಾಣಿಯೆಂದು ಗುರುತಿಸಬಲ್ಲಿರಾ!? - ಹರ್ಮಿಟ್ ಏಡಿ ಸುದ್ದಿ
🎬 Watch Now: Feature Video

ಶಂಖ ಚಲಿಸುತ್ತಿದ್ದರೆ ಅದರಲ್ಲಿ ಆಶ್ಚರ್ಯ ಪಡುವಂತಹದ್ದೇನಿದೆ ಎಂದು ನಿಮಗೆ ಅನ್ನಿಸಬಹುದು. ನಾವೆಲ್ಲ ಶಂಖದ ಹುಳುವನ್ನು ನೋಡಿರುತ್ತೇವೆ. ಅವು ಸಾಮಾನ್ಯವಾಗಿ ಕಾಣಸಿಗುವ ಪ್ರಾಣಿ. ಆದರೆ ಆಶ್ಚರ್ಯವಾಗಿದ್ದು ಶಂಖದ ಏಡಿ. ಶಂಖದ ಏಡಿ ಅಪರೂದ ಜೀವಿ. ಶಂಖದ ಹುಳು ನೆಲವಾಸಿ ಪ್ರಾಣಿ. ಇದೇ ತಳಿಯ ಪ್ರಾಣಿಗಳು ಸಮುದ್ರ ಮತ್ತು ನದಿಯಲ್ಲಿ ದಡದಲ್ಲಿ ವಾಸಿಸುತ್ತವೆ. ಆದ್ರೂ ಶಂಖದ ಹುಳುವಿನ ರೀತಿ ಶಂಖದ ಏಡಿ ನೆಲದ ಮೇಲೆ ಕಾಣಸಿಗುವುದಿಲ್ಲ. ಶಂಖದ ಏಡಿ ಅಪರೂಪದ ಜೀವಿಯಾಗಿದ್ದು, ಈ ಏಡಿ ಕೇರಳದ ಕಣ್ಣೂರಿನ ಕೂವೊಡೆ ಗ್ರಾಮದ ಮೋಹನ ಎಂಬುವವರ ಮನೆಯ ಕಾಪೌಂಡ್ನಲ್ಲಿ ಕಾಣಿಸಿದೆ. ಇದನ್ನು ರಕ್ಷಿಸಲಾಗಿದ್ದು, ಕಣ್ಣೂರಿನ ಸೂಕ್ಷ್ಮ ಜೀವಶಾಸ್ತ್ರಜ್ಞ ಲ್ಯಾಬ್ಗೆ ಕಳುಹಿಸಲಾಗಿದೆ.