ಹುಡುಗಿ ಚಾರಿತ್ರ್ಯದ ಬಗ್ಗೆ ಹುಡುಗನ ಹಗುರ ಮಾತು: ರಣಾಂಗಣವಾದ ಸಂಭ್ರಮದ ಮನೆ! - Boy beaten girl family

🎬 Watch Now: Feature Video

thumbnail

By

Published : Mar 31, 2021, 7:10 PM IST

ಶ್ರೀಗಂಗಾನಗರ(ರಾಜಸ್ಥಾನ): ಪರಸ್ಪರ ಇಷ್ಟಪಟ್ಟು ಮದುವೆ ಮಾಡಿಕೊಳ್ಳಲು ನಿರ್ಧರಿಸಿದ್ದ ಹುಡುಗ-ಹುಡುಗಿ ವಿಷಯಕ್ಕೆ ಸಂಬಂಧಿಸಿದಂತೆ ಉಭಯ ಕುಟುಂಬದ ಸದಸ್ಯರು ಹೊಡೆದಾಡಿಕೊಂಡಿರುವ ಘಟನೆ ರಾಜಸ್ಥಾನದ ಶ್ರೀಗಂಗಾ ನಗರದಲ್ಲಿ ನಡೆದಿದೆ. ಎರಡೂ ಕುಟುಂಬದವರು ಇಷ್ಟಪಟ್ಟು ನಿಶ್ಚಿತಾರ್ಥ ನೆರವೇರಿಸಿದ್ದರು. ಇದಾದ ಬಳಿಕ ಯುವತಿ-ಯುವಕ ಫೋನ್​ನಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ಹುಡುಗ ಯುವತಿಯ ಚಾರಿತ್ರ್ಯದ ಬಗ್ಗೆ ಹಗುರವಾಗಿ ಮಾತನಾಡಿದ್ದಾನೆ. ಈ ವಿಷಯ ಹುಡುಗಿ ಕುಟುಂಬದವರ ಕಿವಿಗೆ ಬಿದ್ದಿದೆ. ತಕ್ಷಣವೇ ಯುವಕನ ಊರಿಗೆ ವಾಹನಗಳಲ್ಲಿ ಬಂದಿರುವ ಅನೇಕರು ಕೋಲು, ಆಯುಧಗಳಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ಕೆಲಹೊತ್ತು ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು.ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.