ಆಕಸ್ಮಿಕ ಬೆಂಕಿಗೆ ಹೊತ್ತಿ ಉರಿಯಿತು ಖಾಸಗಿ ಬಸ್ : ವಿಡಿಯೋ - ಕುಕ್ಕಟ್ಪಲ್ಲಿಯಲ್ಲಿ ಹೊತ್ತಿ ಉರಿದ ಖಾಸಗಿ ಬಸ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5017117-thumbnail-3x2-jay.jpg)
ಹೈದರಾಬಾದ್: ಇಲ್ಲಿನ ಕುಕ್ಕಟ್ಪಲ್ಲಿ ಪ್ರದೇಶದಲ್ಲಿ ಖಾಸಗಿ ಪ್ರವಾಸಿ ಬಸ್ಸೊಂದು ಬೆಂಕಿಗಾಹುತಿಯಾಗಿದೆ. ದುರಸ್ತಿ ಕಾರ್ಯಗಳಿಗಾಗಿ ಈ ಬಸ್ಅನ್ನು ಮೈದಾನವೊಂದರಲ್ಲಿ ನಿಲ್ಲಿಸಲಾಗಿತ್ತು. ಶನಿವಾರ ಸಂಜೆ 6 ಗಂಟೆ ಸುಮಾರಿಗೆ ಬಸ್ನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸುವಷ್ಟರಲ್ಲಿ ಬಸ್ ಸಂಪೂರ್ಣ ಬೆಂಕಿಗಾಹುತಿಯಾಗಿತ್ತು. ವೆಂಕಟ್ ರಾವ್ ಎಂಬವರಿಗೆ ಸೇರಿದ ಬಸ್ ಇದಾಗಿದ್ದು, ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಬಸ್ಗೆ ಬೆಂಕಿ ಹಚ್ಚಿರಬಹುದೆಂದು ಆರೋಪಿಸಿದ್ದಾರೆ.
TAGGED:
Kukatpally bus fire video