ರಫೇಲ್ ಸೇರ್ಪಡೆ ಸೇನೆಗೆ ಮತ್ತಷ್ಟು ಶಕ್ತಿ ತುಂಬಲಿದೆ: ನಿವೃತ್ತ ವಾಯುಪಡೆ ಅಧಿಕಾರಿ - ರಫೇಲ್ ಯುದ್ಧ ವಿಮಾನ ಬಗ್ಗೆ ಪರಿಣಿತರ ಸಲಹೆ,
🎬 Watch Now: Feature Video

ಬಹುನಿರೀಕ್ಷಿತ ಫ್ರಾನ್ಸ್ ನಿರ್ಮಿತ ರಫೇಲ್ ಯುದ್ಧ ವಿಮಾನಗಳ ಪೈಕಿ ಮೊದಲ ಹಂತದಲ್ಲಿ ಐದು ವಿಮಾನಗಳು ಇಂದು ಅಂಬಾಲಾಕ್ಕೆ ಆಗಮಿಸಿ ಭಾರತೀಯ ವಾಯುಪಡೆಗೆ ಸೇರಿಕೊಂಡಿವೆ. ಈ ಕುರಿತು 'ಈಟಿವಿ ಭಾರತ' ತಂಡವು ನಿವೃತ್ತ ವಾಯುಪಡೆಯ ಮಿಲಿಟರಿ ಅಧಿಕಾರಿ ಖುಷ್ಬೀರ್ ಸಿಂಗ್ ದತ್ ಅವರೊಂದಿಗೆ ಮಾತುಕತೆ ನಡೆಸಿತು. ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಈ ವಿಮಾನಗಳನ್ನು ಅಂಬಾಲಾ ಏರ್ ಬೇಸ್ನಲ್ಲಿ ಸೇರಿಸುವುದು ಮಹತ್ವದ್ದಾಗಿದೆ. ಚೀನಾ ಮತ್ತು ಪಾಕಿಸ್ತಾನದ ಗಡಿಗಳನ್ನು ಕೇವಲ 15 ನಿಮಿಷಗಳಲ್ಲಿ ತಲುಪಬಹುದಾದ ಏಕೈಕ ವಾಯುನೆಲೆ ಎಂದರೆ ಅದು ಅಂಬಾಲಾ ವಾಯುನೆಲೆ ಆಗಿದೆ. ಯಾವುದೇ ಯುದ್ಧದ ಫಲಿತಾಂಶವನ್ನು ಅಂಬಾಲಾ ವಾಯುನೆಲೆಯಿಂದ ಬದಲಾಯಿಸಬಹುದಾಗಿದೆ ಎಂದು ವಿಶ್ಲೇಷಿಸಿದ್ದಾರೆ.
Last Updated : Jul 29, 2020, 8:00 PM IST