ಪಾಕಿಸ್ತಾನದಿಂದ ಬಂದ ವಲಸಿಗ ನೀತಾ ಕನ್ವಾರ್ ಸಿಎಎಗೆ ಬೆಂಬಲ.. - Tonk district news
🎬 Watch Now: Feature Video
ಜೈಪುರ: ದೇಶದೆಲ್ಲೆಡೆ ಪೌರತ್ವ ಕಾಯ್ದೆ ಹಾಗೂ NRC ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಆದರೆ, ಈ ಪ್ರತಿಭಟನೆ ನಡುವೆಯೇ 2019ರ ಸೆಪ್ಟೆಂಬರ್ನಲ್ಲಿ ಭಾರತೀಯ ಪೌರತ್ವ ಪಡೆದ ಪಾಕ್ ವಲಸಿಗ ಮಹಿಳೆಯೊಬ್ಬರು ಚುನಾವಣೆಯೊಂದರಲ್ಲಿ ಗೆಲುವು ಸಾಧಿಸಿ 'ಜನನಾಯಕಿ'ಯಾಗಿದ್ದಾರೆ. ಪಾಕ್‌ನ ವಲಸಿಗರಾದ ನೀತಾ ಕನ್ವಾರ್ ಸಿಎಎಗೆ ಬೆಂಬಲ ನೀಡಿದ್ದಾರೆ. ತನ್ನಂತಹ ಹುಡುಗಿಯರು ಭಾರತೀಯ ವ್ಯಕ್ತಿ ಮದುವೆಯಾಗಲು ಮತ್ತು ಭಾರತದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲು ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದು ಅವರು ಹೇಳಿದರು. ಪೌರತ್ವ ಪಡೆಯಲು ಸ್ವತಃ 8 ವರ್ಷ ಕಾಯಬೇಕಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.