ದೆಹಲಿ ಗ್ಯಾಂಗ್​​ ರೇಪ್​ ಪ್ರಕರಣಕ್ಕೆ 8 ವರ್ಷ: ಇಡೀ ದೇಶಕ್ಕೆ ಇಂದು 'ಕರಾಳ ದಿನ' ಎಂದ ನಿರ್ಭಯಾ ತಾಯಿ - nirbhaya case

🎬 Watch Now: Feature Video

thumbnail

By

Published : Dec 16, 2020, 7:58 AM IST

Updated : Dec 16, 2020, 10:22 AM IST

ದೆಹಲಿಯ 23 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ನಿರ್ಭಯಾ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ, ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿ ಅಸುನೀಗಿದಳು. ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಆ ಕರಾಳ ಘಟನೆ ನಡೆದು ಇಂದಿಗೆ ಸರಿಯಾಗಿ 8 ವರ್ಷ. ಆರು ಮಂದಿ ಕಾಮಾಂಧರು ಬಸ್ಸಿನೊಳಗೆ ಆಕೆಯನ್ನು ಕ್ರೂರವಾಗಿ ಅತ್ಯಾಚಾರ ಮಾಡಿ ಬಸ್​​ನಿಂದ ಆಚೆಗೆಸಿದಿದ್ದರು. 2012 ಡಿಸೆಂಬರ್​​ 16 ರ ರಾತ್ರಿ ನಡೆದ ಈ ಅಮಾನವೀಯ ಕೃತ್ಯ ಇಡೀ ದೇಶದ ಜನತೆಯನ್ನು ರೊಚ್ಚಿಗೆಬ್ಬಿಸಿತ್ತು. ದೇಶಾದ್ಯಂತ ಜನ ಬೀದಿಗಳಿದು ನ್ಯಾಯಕ್ಕಾಗಿ ಹೋರಾಟ ನಡೆಸಿದ್ದರು. ಮೃತ ನಿರ್ಭಯಾಳ ತಾಯಿ ಆಶಾದೇವಿಯವರು, ಮಗಳ ಸಾವಿಗೆ ನ್ಯಾಯ ಒದಗಿಸಲು ಸುಮಾರು 7 ವರ್ಷಕ್ಕೂ ಹೆಚ್ಚು ಕಾಲ ಕಾನೂನಾತ್ಮಕ ಹೋರಾಟ ನಡೆಸಿದ್ರು. ಕೊನೆಗೂ ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಿ ಆಕೆಯ ಆತ್ಮಕ್ಕೆ ಶಾಂತಿ ಸಿಗುವಂತೆ ಮಾಡುವಲ್ಲಿ ಆಕೆಯ ತಾಯಿ ಆಶಾ ದೇವಿ ಹಾಗೂ ನಿರ್ಭಯಾ ಕೇಸ್​ನ ವಕೀಲೆ ಸೀಮಾ ಕುಶ್ವಾಹ ಯಶಸ್ವಿಯಾದರು. ಈ ಬಗ್ಗೆ ಇಬ್ಬರೂ ಈಟಿವಿ ಭಾರತ್​ಗೆ ಪ್ರತಿಕ್ರಿಯಿಸಿದ್ದಾರೆ.
Last Updated : Dec 16, 2020, 10:22 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.