ಯುರೋಪ್ ಸಂಸದರನ್ನು ಸರ್ಕಾರದ ಪರ ಮಾತನಾಡಲು ಆಹ್ವಾನಿಸಿರಬಹುದು: ಚಿದು ಆರೋಪ - ಕಾಂಗ್ರೆಸ್ ನಾಯಕ ಪಿ ಚಿದಂಬರಂ
🎬 Watch Now: Feature Video

ಬಹುಕೋಟಿ ಐಎನ್‌ಎಕ್ಸ್ ಮೀಡಿಯಾ ಹಗರಣ ಸಂಬಂಧ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಅವರಿಗೆ ನವೆಂಬರ್ 13ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ದೆಹಲಿಯ ತಿಹಾರ್ ಜೈಲಿಗೆ ಚಿದಂಬರಂ ಅವರನ್ನು ಕರೆದೊಯ್ಯುತ್ತಿರುವಾಗ ಯುರೋಪ್ ಸಂಸದರ ನಿಯೋಗ ಕಾಶ್ಮೀರಕ್ಕೆ ಭೇಟಿ ನೀಡಿರುವುದರ ಬಗ್ಗೆ ಚಿದು ಪ್ರತಿಕ್ರಿಯೆ ನೀಡಿದ್ದಾರೆ. ಯುರೋಪ್ ಸಂಸದರನ್ನು ಸಂಸತ್ತಿಗೆ ಬಂದು ಸರ್ಕಾರದ ಪರವಾಗಿ ಮಾತನಾಡುವಂತೆ ಆಮಂತ್ರಣ ನೀಡಿರಬಹುದು. ಯಾರಿಗೆ ಗೊತ್ತು? ಈ ರೀತಿಯೂ ನಡೆಯಬಹುದು ಎಂದು ಕೇಂದ್ರದ ಎನ್‌ಡಿಎ ಸರ್ಕಾರವನ್ನು ಟೀಕಿಸಿದ್ದಾರೆ.