'ದೇವರನಾಡ'ಲ್ಲಿ ಮುನಿದ ವರುಣ... ರಣಮಳೆಗೆ ಮತ್ತೆ ಬೀದಿಗೆ ಬಿದ್ದ ಲಕ್ಷಾಂತರ ಮಂದಿ! - ಕೇರಳ ಪ್ರವಾಹ
🎬 Watch Now: Feature Video
2018ರ ಆಗಸ್ಟ್ ತಿಂಗಳಲ್ಲಿ ವರುಣ ದೇವರನಾಡಿನ ಮೇಲೆ ತನ್ನ ಉಗ್ರ ಪ್ರತಾಪವನ್ನು ತೋರಿಸಿದ್ದ. ಅಂದು ಉಂಟಾಗಿದ್ದ ಪ್ರವಾಹ, ಭೂ ಕುಸಿತಕ್ಕೆ ಒಬ್ಬರಲ್ಲ ಇಬ್ಬರಲ್ಲ ಬರೋಬ್ಬರಿ 400 ಮಂದಿ ಜೀವ ಕಳೆದುಕೊಂಡಿದ್ರು. ಇದೀಗ 2019ರ ಆಗಸ್ಟ್‌ನಲ್ಲೂ ರಣಮಳೆ ಕೇರಳಿಗರ ಮೇಲೆ ಮತ್ತೆ ತನ್ನ ಪ್ರತಾಪ ತೋರುತ್ತಿದೆ. ಕಳೆದ ನಾಲ್ಕೈದು ದಿನಗಳಿಂದ ಬಿಡದೆ ಸುರಿಯುತ್ತಿರುವ ಮಹಾಮಳೆ ಮತ್ತೆ ಲಕ್ಷಾಂತರ ಮಂದಿಯನ್ನು ಬೀದಿಗೆ ತಳ್ಳಿಬಿಟ್ಟಿದೆ.