'ಮೇಡ್ ಇನ್ ಚೀನಾ' ಬಹಿಷ್ಕಾರ 'ಮೇಕ್ ಇನ್ ಇಂಡಿಯಾ' ಮೇಲೆ ಪ್ರಭಾವ ಬೀರಬಹುದು: ಸಂಜಯ್ ಜೋಶಿ - Senior Journalist Smita Sharma
🎬 Watch Now: Feature Video
ಚೀನಾದ 59 ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸಿರುವುದು ಭಾರತ ಸರ್ಕಾರದ ಪ್ರಮುಖ ಕಾರ್ಯವಾಗಿದೆ. ಆದರೆ ಚೀನಾ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಇದೊಂದೇ ಮಾರ್ಗವಲ್ಲ. ಇದಕ್ಕಾಗಿ ದೀರ್ಘಾವಧಿಯ ಕಾರ್ಯತಂತ್ರದ ದೃಷ್ಟಿಕೋನವನ್ನು ಬೆಳೆಸಿಕೊಳ್ಳಬೇಕಿದೆ ಎಂದು ಅಬ್ಸರ್ವರ್ ರಿಸರ್ಚ್ ಫೌಂಡೇಶನ್ (ಒಆರ್ಎಫ್) ಅಧ್ಯಕ್ಷ ಸಂಜಯ್ ಜೋಶಿ ಹೇಳಿದರು. ಹಿರಿಯ ಪತ್ರಕರ್ತೆ ಸ್ಮಿತಾ ಶರ್ಮಾ ಅವರೊಂದಿಗಿನ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಆ್ಯಪ್ಗಳ ಬ್ಯಾನ್ ಮೂಲಕ ರಾತ್ರೋರಾತ್ರಿ ಚೀನಾದೊಂದಿಗಿನ ಪೂರೈಕೆ ಸರಪಳಿ ಬಿಡಿಸುವುದು ಅಸಾಧ್ಯ. 'ಮೇಡ್ ಇನ್ ಚೀನಾ' ಉತ್ಪನ್ನಗಳ ಬಹಿಷ್ಕಾರ 'ಮೇಕ್ ಇನ್ ಇಂಡಿಯಾ' ಕಾರ್ಯಕ್ರಮದ ಮೇಲೆ ಪರಿಣಾಮ ಬೀರಬಹುದು. ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತವು ಚೀನಾದ ಕಡೆಗೆ ವಾಸ್ತವಿಕ ದೃಷ್ಟಿಕೋನವನ್ನು ಅಳವಡಿಸಿಕೊಳ್ಳಬೇಕು, ಇಲ್ಲದಿದ್ದರೆ ಭಾರತದ ಆರ್ಥಿಕತೆಗೆ ಹಾನಿಯುಂಟಾಗಬಹುದು ಎಂದು ಅಭಿಪ್ರಾಯಪಟ್ಟರು.