ಗೋಮೂತ್ರ ಹಾಗೂ ಸಗಣಿ ಕೊರೊನಾ ಗುಣಪಡಿಸುವಲ್ಲಿ ಸಹಾಯಕ: ಬಿಜೆಪಿ ಶಾಸಕಿ - ಅಸ್ಸೋಂ ಬಿಜೆಪಿ ಶಾಸಕಿ ಸುಮನ್​ ಹರಿಪ್ರಿಯಾ

🎬 Watch Now: Feature Video

thumbnail

By

Published : Mar 3, 2020, 1:48 PM IST

Updated : Mar 3, 2020, 3:38 PM IST

ಸಾವಿರಾರು ಜೀವಗಳನ್ನು ಬಲಿ ಪಡೆದು, ಕೋಟ್ಯಂತರ ಜನರಲ್ಲಿ ಆತಂಕ ಮೂಡಿಸಿರುವ ಮಾರಣಾಂತಿಕ ಕೊರೊನಾ ವೈರಸ್​ಗೆ ಔಷಧ ಕಂಡುಹಿಡಿಯಲು ಜಗತ್ತಿನ ವೈದ್ಯರು ಚಿಂತಿಸುತ್ತಿದ್ದಾರೆ. ಈ ನಡುವೆ ಅಸ್ಸೋಂನ ಬಿಜೆಪಿ ಶಾಸಕಿಯೊಬ್ಬರು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಬಿಜೆಪಿ ಶಾಸಕಿ ಸುಮನ್​ ಹರಿಪ್ರಿಯಾ, ಸಗಣಿ ಹಾಗೂ ಗೋಮೂತ್ರ, ಮಾರಕ ಕೊರೊನಾ ವೈರಸ್​ ಹಾಗೂ ಕ್ಯಾನ್ಸರ್​ ಗುಣಪಡಿಸುವಲ್ಲಿ ಸಹಕಾರಿ ಎಂದು ಹೇಳಿದ್ದಾರೆ. "ಹಸುವಿನ ಸಗಣಿ ತುಂಬಾ ಸಹಾಯಕ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಅಂತೆಯೇ, ಗೋಮೂತ್ರವನ್ನು ಸಿಂಪಡಿಸಿದರೆ, ಆ ಪ್ರದೇಶವನ್ನು ಅದು ಶುದ್ಧೀಕರಿಸುತ್ತದೆ. ಕೊರೊನಾ ವೈರಸ್ ಗುಣಪಡಿಸುವಲ್ಲಿ ಈ ಗೋಮುತ್ರ ಹಾಗೂ ಸಗಣಿ ಇದೇ ರೀತಿ ಮಾಡಬಹುದೆಂದು ನಾನು ನಂಬುತ್ತೇನೆ ಎಂದು ಹರಿಪ್ರಿಯಾ ಹೇಳಿದ್ದಾರೆ.
Last Updated : Mar 3, 2020, 3:38 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.