50, 100 ಅಲ್ಲ, ಒಂದೇ ಗಿಡದಲ್ಲಿ ಬರೋಬ್ಬರಿ 700 ತೆಂಗಿನಕಾಯಿ! - ಒಂದೇ ತೆಂಗಿನ ಗಿಡದಲ್ಲಿ 700 ಕಾಯಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10376763-thumbnail-3x2-wdfdfd.jpg)
ಕಡಪ(ಆಂಧ್ರಪ್ರದೇಶ): ಸಾಮಾನ್ಯವಾಗಿ ತೆಂಗಿನ ಗಿಡದಲ್ಲಿ 200 ರಿಂದ 300ರವರೆಗೆ ತೆಂಗಿನ ಕಾಯಿ ಬಿಡುವುದು ಸಹಜ. ಆದರೆ ಇಲ್ಲೋರ್ವ ವ್ಯಕ್ತಿ ಬೆಳೆಸಿರುವ ತೆಂಗಿನ ಮರ ಬರೋಬ್ಬರಿ 700 ಕಾಯಿ ಬಿಟ್ಟಿದೆ. ಕಡಪಾ ಜಿಲ್ಲೆಯ ಗೋಪಾಲಕೃಷ್ಣ ಎಂಬುವರು ಬೆಳೆಸಿರುವ ಈ ತೆಂಗಿನಗಿಡ ಇಷ್ಟೊಂದು ಕಾಯಿ ಬಿಟ್ಟಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಈ ತೆಂಗಿನ ಮರ ನೆಡಲಾಗಿದ್ದು, ಇದೀಗ ಕಾಯಿ ಬಿಟ್ಟಿದೆ. ಇದಕ್ಕೆ ಕೇವಲ ಸಾವಯವ ಗೊಬ್ಬರ ಬಳಕೆ ಮಾಡಲಾಗ್ತಿದ್ದು, ಪ್ರತಿದಿನ ನೀರು ಹರಿಸಲಾಗ್ತಿದೆ.