'ನಾನು ಆರುವ ದೀಪ, ಆತ ಬಾಳಿ ಬದುಕಲಿ': ಯುವಕನಿಗೆ ಆಕ್ಸಿಜನ್ ಬೆಡ್​ ಬಿಟ್ಟುಕೊಟ್ಟು ವೃದ್ಧನಿಂದ ಪ್ರಾಣ ತ್ಯಾಗ! - old man vacating oxygen bed for young man

🎬 Watch Now: Feature Video

thumbnail

By

Published : Apr 28, 2021, 7:55 PM IST

Updated : Apr 28, 2021, 10:19 PM IST

ನಾಗ್ಪುರ: ಕೊರೊನಾ ಸೋಂಕಿನಿಂದ ಬಳಲುತ್ತಿರುವ ಬಹುತೇಕ ರೋಗಿಗಳು ಆಮ್ಲಜನಕಕ್ಕಾಗಿ ಹೆಣಗಾಡುತ್ತಿದ್ದಾರೆ. ಆದರೆ, ಇಲ್ಲೊಬ್ಬ ಅಜ್ಜ ತಾವು ಸಾವಿನ ಮನೆಯಲ್ಲಿದ್ದರೂ ಅದಕ್ಕೆ ಹೆದರದೇ ನನ್ನದೆಲ್ಲ ಮುಗಿದಿದೆ ಎಂಬ ತೀರ್ಮಾನಕ್ಕೆ ಬಂದು, ಯುವಕರೊಬ್ಬರಿಗೆ ತಮ್ಮ ಬೆಡ್​ ಬಿಟ್ಟುಕೊಟ್ಟು ಎಲ್ಲರಿಗೂ ನೈತಿಕ ಹಾಗೂ ಜೀವನದ ಪಾಠ ಮಾಡಿದ್ದಾರೆ. ಈ ಮೂಲಕ ಈ ತಾತ ಸಮಾಜಕ್ಕೆ ಮಾನವೀಯತೆಯ ಪಾಠ ಮಾಡಿ ಇಹಲೋಹ ತ್ಯಜಿಸಿದ್ದಾರೆ. 85 ವರ್ಷದ ಕೊರೊನಾ ಪೀಡಿತ ನಾರಾಯಣರಾವ್ ದಾಭಡ್ಕರ್ ಎಂಬುವರು ಇಂದಿರಾ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದರು. ನಿರ್ಗತಿಕ ವಯಸ್ಕನಿಗೆ ತಾನು ದಾಖಲಾಗಿದ್ದ ಆಕ್ಸಿಜನ್​ ಬೆಡ್​ ಬಿಟ್ಟುಕೊಟ್ಟು ಆಸ್ಪತ್ರೆಯಿಂದ ಹೊರನಡೆದಿದ್ದಾರೆ. ವಿಶಾಲ ಹೃದಯದ ಈ ಅಜ್ಜ ಮನೆಗೆ ತೆರಳಿ ಪ್ರಾಣ ತ್ಯಾಗ ಮಾಡಿ ಕೊರೊನಾ ತಂದೊಡ್ಡಿದ ಬಿಕ್ಕಟ್ಟಿನಲ್ಲಿ ಮಾನವೀಯತೆಯ ಸಂದೇಶ ಸಾರಿದ್ದಾರೆ.
Last Updated : Apr 28, 2021, 10:19 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.