ದೆಹಲಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಚಕ್ಕಾ ಜಾಮ್ ಪ್ರತಿಭಟನೆ: ಪೊಲೀಸ್​ ಸರ್ಪಗಾವಲು - ದೆಹಲಿಯಲ್ಲಿ ರಸ್ತೆ ತಡೆದು ಪ್ರತಿಭಟನೆ

🎬 Watch Now: Feature Video

thumbnail

By

Published : Feb 6, 2021, 1:16 PM IST

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಇಂದು ರಸ್ತೆ ತಡೆ ಮಾಡಿ ಚಕ್ಕಾ ಜಾಮ್​ ಪ್ರತಿಭಟನೆ ನಡೆಸುತ್ತಿದ್ದಾರೆ. ಜ.26ರಂದು ರಾಜಧಾನಿಯಲ್ಲಿ ನಡೆದ ಘಟನೆಯಿಂದ ಎತ್ತೆಚ್ಚುಕೊಂಡಿರುವ ಪೊಲೀಸ್​ ಇಲಾಖೆ ಬಿಗಿ​ ಬಂದೋಬಸ್ತ್ ಕೈಗೊಂಡಿದ್ದು, ದೆಹಲಿಯ ಗಡಿ ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಿದೆ. ಪ್ರಮುಖವಾಗಿ ಗಾಜಿಪುರ್, ಟಕ್ರಿ ಹಾಗೂ ಸಿಂಘು ಗಡಿ ಭಾಗದಲ್ಲಿ ಖಾಕಿ ಕಣ್ಗಾವಲಿರಿಸಿದೆ. ಅಷ್ಟೇ ಅಲ್ಲದೆ ಪಂಜಾಜ್,​ ಹರಿಯಾಣ, ಉತ್ತರ ಪ್ರದೇಶಗಳಲ್ಲೂ ಬಿಗಿ ಪೊಲೀಸ್​ ವ್ಯವಸ್ಥೆ ಮಾಡಲಾಗಿದೆ. ರಾಜಧಾನಿಯಲ್ಲಿ ಮಾತ್ರವಲ್ಲದೇ ರಾಜ್ಯದ ಕೆಲ ಭಾಗಗಳಲ್ಲಿಯೂ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.