'ಮಗುವಿನ ಜನನದ ಸಂತಸ ಪತಿ ಸಾವಿನೊಂದಿಗೆ ಮಾಯ': ಹುತಾತ್ಮನ ಪತ್ನಿಯ ನೋವಿನ ನುಡಿ - ಬಿಜಾಪುರ
🎬 Watch Now: Feature Video
ಬಿಜಾಪುರ: ಇತ್ತೀಚೆಗೆ ಛತ್ತೀಸ್ಗಡದಲ್ಲಿ ನಡೆದ ಭದ್ರತಾಪಡೆ ಮತ್ತು ನಕ್ಸಲರ ನಡುವಿನ ಗುಂಡಿನ ಚಕಮಕಿಯಲ್ಲಿ 22 ಸಿಬ್ಬಂದಿ ಹುತಾತ್ಮರಾಗಿದ್ದರು. ಹುತಾತ್ಮರಾದವರಲ್ಲಿ ಬಿಜಾಪುರದ ಕಿಶೋರ್ ಆಂಡ್ರೀಕ್ ಕೂಡ ಒಬ್ಬರು. ಈ ಯೋಧನ ಪತ್ನಿ ನಾಲ್ಕು ತಿಂಗಳ ಗರ್ಭಿಣಿ. ಮದುವೆಯಾಗಿ ಸುಮಾರು 19 ವರ್ಷಗಳ ಬಳಿಕ ಕುಟುಂಬಕ್ಕೆ ಮಗುವಿನ ಆಗಮನದ ನಿರೀಕ್ಷೆ ಹೊತ್ತಿದ್ದವರಿಗೆ ಪತಿಯ ಅಗಲಿಕೆ ಅತೀವ ನೋವುಂಟು ಮಾಡಿದೆ. ಈ ಬಗ್ಗೆ ಕಿಶೋರ್ ಪತ್ನಿ ರಿಂಕೆ ಆಂಡ್ರೀಕ್ ಈಟಿವಿ ಭಾರತ ಜೊತೆ ತನ್ನ ನೋವು ಹಂಚಿಕೊಂಡಿದ್ದಾಳೆ. "ಇಷ್ಟು ವರ್ಷಗಳ ನಂತರ ತಾಯಿಯಾಗುತ್ತಿದ್ದೇನೆ. ಆದರೆ ಈ ಸಂತೋಷವು ಗಂಡನ ಮರಣದೊಂದಿಗೆ ಮಾಯವಾಗಿದೆ. ಈ ಮಗು ತನ್ನ ತಂದೆಯ ನೆರಳನ್ನು ಕಳೆದುಕೊಂಡು ಬದುಕಬೇಕು" ಎಂದು ಕಣ್ಣೀರಿಟ್ಟಳು.