ಕಾಂಗ್ರೆಸ್ ಬಿಕ್ಕಟ್ಟು: ಗುಲಾಂ ನಬಿ ಆಜಾದ್ ವಿರುದ್ಧ ಅಸಾದುದ್ದೀನ್ ಓವೈಸಿ ತೀವ್ರ ವಾಗ್ದಾಳಿ! - ಕಾಂಗ್ರೆಸ್ ಬಿಕ್ಕಟ್ಟು
🎬 Watch Now: Feature Video
ಹೈದರಾಬಾದ್: ಕಾಂಗ್ರೆಸ್ ಪಕ್ಷದಲ್ಲಿ ಉಂಟಾಗಿರುವ ಬಿಕ್ಕಟು ವಿಚಾರವಾಗಿ ಸಂಸದ, ಎಐಎಂಐಎಂ ಪಕ್ಷದ ಮುಖಂಡ ಅಸಾದುದ್ದೀನ್ ಓವೈಸಿ ಮಾತನಾಡಿದ್ದು, ಗುಲಾಂ ನಬಿ ಆಜಾದ್ ವಿರುದ್ಧ ವಾಗ್ದಾಳಿ ನಡೆಸಿದರು. ಈ ಹಿಂದೆ ನನ್ನನ್ನು ಬಿಜೆಪಿಯ 'ಬಿ' ಟೀಂ ಎಂದು ಗುಲಾಂ ನಬಿ ಆಜಾದ್ ಕರೆದಿದ್ದರು. ಆದರೆ ಇದೀಗ 'ಕೈ' ಪಕ್ಷದ ಮಾಜಿ ಅಧ್ಯಕ್ಷರೇ ಅವರ ವಿರುದ್ಧ ಈ ಮಾತು ಹೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿರುವ ಮುಸ್ಲಿಂ ಮುಖಂಡರು ತಮ್ಮ ಸಮಯ ವ್ಯರ್ಥ ಮಾಡದೇ ಇದರ ಬಗ್ಗೆ ವಿಚಾರ ಮಾಡಬೇಕು. ಜತೆಗೆ ತಾವು ಕಾಂಗ್ರೆಸ್ ಪಕ್ಷದಲ್ಲಿ ಎಷ್ಟು ದಿನ ಉಳಿದುಕೊಳ್ಳಲಿದ್ದಾರೆ ಎಂಬುದು ಗೊತ್ತಿಲ್ಲ ಎಂದೂ ಹೇಳಿದ್ದಾರೆ.