ಚಿಕ್ಕಪ್ಪ ಕಮಲ್ ಹಾಸನ್ ಪರ ಸುಹಾಸಿನಿ ಮತ ಪ್ರಚಾರ: ವಿಡಿಯೋ - ಕಮಲ್ ಹಾಸನ್ ಪರ ಸುಹಾಸಿನಿ ಮತಯಾಚನೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-11217094-91-11217094-1617116414399.jpg)
ಚೆನ್ನೈ: ರಾಜಕಾರಣದ ಅಖಾಡಕ್ಕಿಳಿದಿರುವ ನಟ ಕಮಲ್ ಹಾಸನ್ ತಮಿಳುನಾಡಿನ ಕೊಯಂಬತೂರ್ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಅವರ ಪರವಾಗಿ ನಟಿ ಸುಹಾಸಿನಿ ಮತ ಪ್ರಚಾರ ನಡೆಸುತ್ತಿದ್ದಾರೆ. ಕಮಲ್ ಹಾಸನ್ ಅಣ್ಣನ ಮಗಳಾಗಿರುವ ಸುಹಾಸಿನಿ, ರೇಸ್ ಕೋರ್ಸ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಚಿಕ್ಕಪ್ಪನ ಪರವಾಗಿ ಪ್ರಚಾರ ನಡೆಸಿ, ಮತಯಾಚನೆ ಮಾಡಿದರು. ಮಕ್ಕಳ್ ನೀದಿ ಮಾಯಂ ಪಕ್ಷದ ಸ್ಥಾಪಕ ಅಧ್ಯಕ್ಷರಾಗಿರುವ ಕಮಲ್ ಹಾಸನ್ ಇದೇ ಮೊದಲ ಸಲ ಚುನಾವಣಾ ಕಣಕ್ಕಿಳಿದಿದ್ದು, ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ.