ಪಾಠ ಹೇಳುವ ಗುರುವಿನಿಂದಲೇ ವಿದ್ಯಾರ್ಥಿನಿ ಮೇಲೆ ಆ್ಯಸಿಡ್ ದಾಳಿ! - Acid attack in mumbai,
🎬 Watch Now: Feature Video
ಪಾಠ ಹೇಳುವ ಗುರುವೇ 15 ವರ್ಷದ ಬಾಲಕಿ ಮೇಲೆ ಆ್ಯಸಿಡ್ ದಾಳಿ ನಡೆಸಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. ತಾನು ಓದುತ್ತಿರುವ ಶಾಲೆಯಲ್ಲಿ ವಿದ್ಯಾರ್ಥಿನಿ ಶಿಕ್ಷಕನ ವಿರುದ್ಧ ದೂರು ನೀಡಿದ್ದಳು. ಆ ದೂರನ್ನು ಹಿಂಪಡೆಯುವಂತೆ ಪ್ರಿನ್ಸಿಪಾಲ್, ಶಿಕ್ಷಕ ಸೇರಿ ಮತ್ತಿಬ್ಬರು ನನ್ನ ಮೇಲೆ ಹಲ್ಲೆ ಮಾಡಿದ್ದರು. ಭಾನುವಾರ ಬೆಳಗ್ಗೆ ನನ್ನ ಮೇಲೆ ಆ್ಯಸಿಡ್ ದಾಳಿ ಮಾಡಿದ್ದರು. ಅದೃಷ್ಟವಶಾತ್ ಆ್ಯಸಿಡ್ ದಾಳಿಯಿಂದ ನಾನು ತಪ್ಪಿಸಿಕೊಂಡಿದ್ದು, ಈ ವೇಳೆ ಕೈಗೆ, ಕಾಲಿಗೆ ಸ್ವಲ್ಪ ಗಾಯಗಳಾಗಿವೆ ಎಂದು ಬಾಲಕಿ ಹೇಳಿದ್ದಾಳೆ. ಈ ಘಟನೆ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇನ್ನು ಬಾಲಕಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಿದ್ದಾಳೆ.