ಭೀಕರ ಪ್ರವಾಹಕ್ಕೆ ಕಾಜಿರಂಗಾ ಪಾರ್ಕ್ನ 96 ಪ್ರಾಣಿ ಬಲಿ.. ರಸ್ತೆ ಮೇಲೆ ಮಲಗಿದ ಖಡ್ಗಮೃಗ-ವಿಡಿಯೋ - ಭೀಕರ ಪ್ರವಾಹಕ್ಕೆ ಕಾಜಿರಂಗಾ ಪಾರ್ಕ್ನ 96 ಪ್ರಾಣಿಗಳು ಬಲಿ
🎬 Watch Now: Feature Video
ಅಸ್ಸೋಂ: ಭೀಕರ ಪ್ರವಾಹಕ್ಕೆ ಅಸ್ಸೋಂ ತಲ್ಲಣಗೊಂಡಿದೆ. 102 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ವಿಶ್ವ ಪ್ರಸಿದ್ಧ ಕಾಜಿರಂಗಾ ರಾಷ್ಟ್ರೀಯ ಉದ್ಯಾನವನ ಶೇ.95ರಷ್ಟು ಮುಳುಗಡೆಯಾಗಿದೆ. ಈವರೆಗೆ 8 ಖಡ್ಗಮೃಗಗಳು, 3 ಕಾಡೆಮ್ಮೆಗಳು, 7 ಕಾಡು ಹಂದಿಗಳು, 76 ಜಿಂಕೆಗಳು ಹಾಗೂ 2 ಮುಳ್ಳುಹಂದಿಗಳು ಸೇರಿ ಒಟ್ಟು 96 ಪ್ರಾಣಿ ಸಾವನ್ನಪ್ಪಿವೆ. ಪ್ರವಾಹದಲ್ಲಿ ಗಾಯಗೊಂಡು ಖಡ್ಗಮೃಗವೊಂದು ಬಾಗೋರಿ ರೇಂಜ್ನ ರಾಷ್ಟ್ರೀಯ ಹೆದ್ದಾರಿ-37ರ ರಸ್ತೆ ಮೇಲೆ ಮಲಗಿ ವಿಶ್ರಾಂತಿ ಪಡೆಯುತ್ತಿರುವ ದೃಶ್ಯ ವೈರಲ್ ಆಗಿದೆ.