ಚಲಿಸುತ್ತಿದ್ದ ಬಸ್ನಿಂದ ಜಾರಿ ರಸ್ತೆಗೆ ಬಿದ್ದ ವೃದ್ಧೆ: ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಕೊನೆಯುಸಿರು - 61 year old Woman Slipped from the Bus,
🎬 Watch Now: Feature Video

ಈರೋಡ್(ತಮಿಳುನಾಡು): ಜನಸಂದಣಿ ಹೆಚ್ಚಾಗಿದ್ದರಿಂದ ವೃದ್ಧೆಯೊಬ್ಬಳು ವೇಗವಾಗಿ ಚಲಿಸುತ್ತಿದ್ದ ಬಸ್ನಿಂದ ಜಾರಿ ರಸ್ತೆಗೆ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ತಮಿಳುನಾಡಿನ ಈರೋಡ್ನಲ್ಲಿ ನಡೆದಿದೆ. ಭವಾನಿಸಾಗರ್ನಿಂದ ಬನ್ನರಿ ಕಡೆಗೆ ಹೋಗುವ ಬಸ್ ಅನ್ನು 61 ವರ್ಷದ ವೃದ್ಧೆ ಹತ್ತಿದ್ದಳು. ಬಸ್ನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರಿಂದ ಬಾಗಿಲ ಬಳಿಯಿದ್ದ ವೃದ್ಧೆ ಜಾರಿ ವೇಗವಾಗಿ ಚಲಿಸುತ್ತಿದ್ದ ಬಸ್ನಿಂದ ಸಮತೋಲನ ಕಳೆದುಕೊಂಡು ಹೊರಕ್ಕೆ ಎಸೆಯಲ್ಪಟ್ಟಿದ್ದಾಳೆ. ಗಂಭೀರವಾಗಿ ಗಾಯಗೊಂಡಿದ್ದ ವೃದ್ಧೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಫೆ.27ರಂದು ಆಕೆ ಸಾವನ್ನಪ್ಪಿದ್ದಾಳೆ. ಸಂಚಾರದ ಸಂದರ್ಭದಲ್ಲಿ ಬಸ್ಸಿನ ಬಾಗಿಲುಗಳು ಮುಚ್ಚಿದ್ದಿದ್ದರೆ ಮಹಿಳೆ ಬದುಕುಳಿಯುತ್ತಿದ್ದಳು. ಈ ವಿಡಿಯೋ ಇದೀಗ ವೈರಲ್ ಆಗಿದೆ.