ಪೂರ್ವ ಟರ್ಕಿಯಲ್ಲಿನ ಭೂಕಂಪನ.. 20ಮಂದಿ ಸಾವು, ನೂರಾರು ಜನರಿಗೆ ಗಾಯ! - ಪೂರ್ವ ಟರ್ಕಿಯ ವ 20 ಜನರು ಸಾವು
🎬 Watch Now: Feature Video
ಎಲಾಜಿಗ್: ಪೂರ್ವ ಟರ್ಕಿಯಲ್ಲಿ ಪ್ರಬಲ ಭೂಕಂಪನದಿಂದ ಕನಿಷ್ಠ 20 ಜನ ಸಾವನ್ನಪ್ಪಿದ್ರೆ, ನೂರಾರು ಮಂದಿ ಗಾಯಗೊಂಡಿದ್ದಾರೆ. 6.8ರ ತೀವ್ರತೆಯ ಭೂಕಂಪನದ ನಂತರ ಕನಿಷ್ಠ 30 ಜನರು ಕಾಣೆಯಾಗಿದ್ದಾರೆ. ಇದು ಪೂರ್ವ ಪ್ರಾಂತ್ಯದ ಎಲಾಜಿಗ್‌ನ ಸಣ್ಣ ಸರೋವರದ ಪಟ್ಟಣವಾದ ಸಿವ್ರೈಸ್‌ನ ಕೇಂದ್ರ ಬಿಂದುವಾಗಿದೆ. ಭಯಕ್ಕೆ ಕಾರಣವಾದ ಭೂಕಂಪದಿಂದ ಹಾನಿಗೊಳಗಾದ ಜನರಿಗೆ ಸಹಾಯ ಮಾಡಲು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಟರ್ಕಿಯ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ತಿಳಿಸಿದ್ದಾರೆ.