20ಕ್ಕೂ ಹೆಚ್ಚು ದನ-ಕರುಗಳ ಮೇಲೆ ಹರಿದ ಎಕ್ಸ್ಪ್ರೆಸ್ ರೈಲು... ಇಂಜಿನ್ನಲ್ಲಿ ಮೃತದೇಹಗಳು ಸಿಲುಕಿ ನಿಂತ ಟ್ರೈನ್! - 20 cow killed in train accident,
🎬 Watch Now: Feature Video
ಸುಮಾರು 20 ದನ-ಕರುಗಳು ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ. ಇಂದು ಬೆಳಗ್ಗೆ 8:30ರ ವೇಳೆಗೆ ರಾಜಾಧಾನಿ ಎಕ್ಸ್ಪ್ರೆಸ್ ರೈಲು ದೆಹಲಿ ಕಡೆ ಪ್ರಯಾಣ ಬೆಳೆಸುತ್ತಿತ್ತು. ಈ ವೇಳೆ ಆಗ್ರಾದಲ್ಲಿ ಸುಮಾರು 20ಕ್ಕೂ ಹೆಚ್ಚು ದನ-ಕರುಗಳ ಹಿಂಡು ರೈಲ್ವೆ ಟ್ರ್ಯಾಕ್ ಮೇಲೆ ಬಂದಿದ್ದು, ಅವುಗಳಿಗೆ ರೈಲು ಗುದ್ದಿದೆ. ಗುದ್ದಿದ ರಭಸಕ್ಕೆ ಕೆಲ ದನ-ಕರುಗಳು ತೂರಿ ಬಿದ್ದು ಸಾವನ್ನಪ್ಪಿದ್ದರೇ, ಇನ್ನೂ ಕೆಲವು ರೈಲಿಗೆ ಸಿಲುಕಿ ಮೃತಪಟ್ಟಿವೆ. ರೈಲಿನ ಇಂಜಿನ್ ಮತ್ತು ಬೋಗಿಗಳಿಗೆ ದನ-ಕರುಗಳು ಸಿಲುಕಿರುವುದರಿಂದ ರೈಲನ್ನು ಸ್ವಲ್ಪ ದೂರದಲ್ಲಿ ನಿಲ್ಲಿಸಲಾಗಿತ್ತು. ಈ ಸುದ್ದಿ ಹಿರಿಯ ಅಧಿಕಾರಿಗಳಿಗೆ ತಿಳಿದ ಬಳಿಕ ಅವರು ಸ್ಥಳಕ್ಕೆ ದೌಡಾಯಿಸಿದ್ದರು. ಬಳಿಕ ಇಂಜಿನ್ನಲ್ಲಿ ಸಿಲುಕಿದ್ದ ದೇಹಗಳನ್ನು ಹೊರತೆಗೆದ ನಂತರ ರೈಲು ಮುಂದಕ್ಕೆ ಸಾಗಿತು.