ಸಿಬ್ಬಂದಿ ಕಣ್ಣಿಗೆ ಖಾರದ ಪುಡಿ ಎರಚಿ ಜೈಲಿಂದ 16 ಕೈದಿಗಳು ಪರಾರಿ - ಸಿಬ್ಬಂದಿಗಳ ಕಣ್ಣಿಗೆ ಖಾರದ ಪುಡಿ ಎರಚಿ ಜೈಲ್ನಿಂದ 16 ಕೈದಿಗಳು ಎಸ್ಕೇಪ್
🎬 Watch Now: Feature Video
ರಾಜಸ್ಥಾನದ ಫಲೋಡಿ ಉಪ ಕಾರಾಗೃಹದಲ್ಲಿ ಸಿಬ್ಬಂದಿ ಕಣ್ಣಿಗೆ ಖಾರದ ಪುಡಿ ಎರಚಿ ಹದಿನಾರು ಕೈದಿಗಳು ಸೋಮವಾರ ರಾತ್ರಿ ಪರಾರಿಯಾಗಿದ್ದಾರೆ. ಕೊಲೆ ಮತ್ತು ಮಾದಕವಸ್ತು ಕಳ್ಳಸಾಗಣೆ ಆರೋಪ ಎದುರಿಸುತ್ತಿದ್ದ ಆರೋಪಿಗಳು ತಪ್ಪಿಸಿಕೊಂಡಿದ್ದಾರೆ. ರಾತ್ರಿ 8.30 ರ ಸುಮಾರಿಗೆ ಊಟದ ನಂತರ ತಮ್ಮ ಸೆಲ್ಗಳಿಗೆ ತೆರಳುವಾಗ ಖೈದಿಗಳು ಕಾವಲುಗಾರರ ಕಣ್ಣಿಗೆ ಮೆಣಸಿನ ಪುಡಿ ಎರಚಿದರು. 'ನಾವು ಅವರನ್ನು ಹುಡುಕಲು ಪೊಲೀಸ್ ತಂಡಗಳನ್ನು ರಚಿಸಿದ್ದು, ಕಾರ್ಯಾಚರಣೆ ಪ್ರಾರಂಭವಾಗಿದೆ' ಎಂದು ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕಾಯಲ್ ತಿಳಿಸಿದ್ದಾರೆ.
Last Updated : Apr 6, 2021, 1:22 PM IST