ಬೆಂಗಳೂರು: ಮಾನಸಿಕ ಅಸ್ವಸ್ಥನಿಗೆ ಪಿಎಸ್ಐ ನೆರವು - Traffic Sub in Specter Surendra
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-14918744-thumbnail-3x2-bng.jpg)
ಬೆಂಗಳೂರು: ಯುಗಾದಿ ಹಬ್ಬದಂದೇ ಮಾನಸಿಕ ಅಸ್ವಸ್ಥ ವ್ಯಕ್ತಿಗೆ ಕೆ.ಜಿ.ಹಳ್ಳಿ ಸಂಚಾರಿ ಪೊಲೀಸರು ಬಟ್ಟೆ-ಊಟ ನೀಡಿ ಮಾನವೀಯತೆ ಮೆರೆದಿದ್ದಾರೆ. ನಾಗವಾರ ಜಂಕ್ಷನ್ ಬಳಿ ಹಲವು ದಿನಗಳಿಂದ ಮಾನಸಿಕ ಅಸ್ವಸ್ಥನೊಬ್ಬ ಓಡಾಡುತ್ತಿದ್ದ. ಪ್ರತಿದಿನ ಈ ಜಂಕ್ಷನ್ನಲ್ಲಿ ಕಾರ್ಯನಿರ್ವಹಿಸುವ ಟ್ರಾಫಿಕ್ ಸಬ್ ಇನ್ಸ್ಪೆಕ್ಟರ್ ಸುರೇಂದ್ರ ಎಂಬುವರು ಈತನ ಪರಿಸ್ಥಿತಿ ಕಂಡು ನೆರವಿನ ಹಸ್ತ ಚಾಚಿದ್ದಾರೆ. ನಾಗವಾರ ಜಂಕ್ಷನ್ ಬಳಿ ಊಟವಿಲ್ಲದೆ ಓಡಾಡ್ತಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಗೆ ಹೊಸ ಬಟ್ಟೆ ಕೊಡಿಸಿ, ಊಟಕ್ಕಾಗಿ ಆತನಿಗೆ ಹಣ ನೀಡಿದ್ದಾರೆ. ಪಿಎಸ್ಐ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated : Feb 3, 2023, 8:21 PM IST