ಆಟಿಸಂ ಪೀಡಿತ ಬಾಲಕಿಯ ದಾಖಲೆ: 13 ಗಂಟೆಯಲ್ಲಿ ಲಂಕಾದಿಂದ ತಮಿಳುನಾಡಿನವರೆಗೆ ಈಜು! - ಲಂಕಾದಿಂದ ತಮಿಳುನಾಡಿನವರೆಗೆ ಈಜು

🎬 Watch Now: Feature Video

thumbnail

By

Published : Mar 21, 2022, 10:51 PM IST

Updated : Feb 3, 2023, 8:20 PM IST

ರಾಮನಾಥಪುರಂ(ತಮಿಳುನಾಡು): ಸಾಧನೆ ಮಾಡಬೇಕೆಂಬ ಛಲವಿದ್ದರೆ ಯಾವ ನ್ಯೂನತೆ ಕೂಡ ಅಡ್ಡಿ ಬರಲ್ಲ. ಆಟಿಸಂ(ಸ್ವಲೀನತೆ) ಎಂಬ ಕಾಯಿಲೆಯಿಂದ ಬಳಲುತ್ತಿರುವ ಬಾಲಕಿಯೋರ್ವಳು ಕೇವಲ 13 ಗಂಟೆಗಳಲ್ಲಿ ಶ್ರೀಲಂಕಾದಿಂದ ತಮಿಳುನಾಡಿಗೆ ಈಜುವ ಮೂಲಕ ಹೊಸದೊಂದು ದಾಖಲೆ ಬರೆದಿದ್ದಾಳೆ. ಶ್ರೀಲಂಕಾದ ತಲೈಮನ್ನಾರ್​​ನಿಂದ ಧನುಷ್ಕೋಡಿಯ ಅರಿಚಲ್ಮುನೈಗೆ ಕೇವಲ 13 ಗಂಟೆಗಳಲ್ಲಿ ಈಜಿದ್ದಾಳೆ. ಜಿಯಾ ರೈ ಈ ಸಾಧನೆ ಮಾಡಿದ್ದು, ಮುಂಬೈನಲ್ಲಿ ವಾಸವಾಗಿರುವ ಭಾರತೀಯ ನೌಕಾಧಿಕಾರಿ ಮದನ್​ ರೈ ಅವರ ಪುತ್ರಿ. ಎರಡು ವರ್ಷದವಳಿದ್ದಾಗ ಜಿಯಾ ಆಟಿಸಂ ತೊಂದರೆಗೊಳಗಾಗಿದ್ದು, ವೈದ್ಯರ ಸಲಹೆ ಮೇರೆಗೆ ಈಜು ತರಬೇತಿ ನೀಡಲಾಗ್ತಿದೆ. ಪ್ರತಿ ಗಂಟೆಗೆ 14 ಕಿಲೋ ಮೀಟರ್ ವೇಗದಲ್ಲಿ ಈ ಬಾಲಕಿ ಈಜುತ್ತಾಳೆ.
Last Updated : Feb 3, 2023, 8:20 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.