ದೃಷ್ಟಿ ತೆಗೆಯುವ ನೆಪದಲ್ಲಿ ಹಣ ಎಗರಿಸಿದ ಮಂಗಳಮುಖಿಯರ ಗುಂಪು - ಜ್ಞಾನಭಾರತಿ ಪೊಲೀಸ್ ಠಾಣೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-14908923-thumbnail-3x2-bng.jpg)
ಬೆಂಗಳೂರು : ಮಾರ್ಚ್ 31ರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಉಲ್ಲಾಳದ ಜಸ್ಟ್ ಬೇಕ್ ಅಂಗಡಿಗೆ ಬಂದಿದ್ದ ನಾಲ್ಕೈದು ಮಂಗಳಮುಖಿಯರು ದೃಷ್ಟಿ ತೆಗೆಯುವ ನೆಪದಲ್ಲಿ ಕ್ಯಾಶ್ ಬಾಕ್ಸ್ ಬಳಿ ಬಂದು ಅಂಗಡಿ ಸಿಬ್ಬಂದಿಗೆ ವಂಚಿಸಿ 5 ಸಾವಿರ ರೂ. ಲಪಟಾಯಿಸಿದ್ದಾರೆ. ಬಳಿಕ ಸಿಬ್ಬಂದಿಗೆ ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ. ಕ್ಯಾಷ್ ಎಗರಿಸೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜಸ್ಟ್ ಬೇಕ್ ಮಾಲೀಕ ಲಕ್ಷ್ಮಿಪತಿ ನೀಡಿದ ದೂರಿನನ್ವಯ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated : Feb 3, 2023, 8:21 PM IST