ಡಿಸಿ ಕಚೇರಿ ಮತ್ತು ಜಿ.ಪಂ ತಂಡಗಳ ನಡುವೆ ಕ್ರಿಕೆಟ್ ಪಂದ್ಯ: ಬೌಂಡರಿ ಬಾರಿಸಿದ ಜಿಲ್ಲಾಧಿಕಾರಿ - ಡಿಸಿ ಕಚೇರಿ ಮತ್ತು ಜಿಲ್ಲಾ ಪಂಚಾಯತ್ ತಂಡಗಳ ನಡುವೆ ಕ್ರಿಕೆಟ್ ಪಂದ್ಯ: ಬೌಂಡರಿ ಬಾರಿಸಿದ ಡಿಸಿ ವಿಕಾಸ್ ಕಿಶೋರ್
🎬 Watch Now: Feature Video
ಕೊಪ್ಪಳ: ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅತ್ಯಂತ ಉತ್ಸಾಹದಿಂದ ಕ್ರಿಕೆಟ್ ಆಡಿ ಗಮನ ಸೆಳೆದರು. ವಿಶ್ವ ಕ್ಷಯರೋಗ ದಿನಾಚರಣೆ ಹಾಗೂ ಕ್ಷಯಮುಕ್ತ ಕೊಪ್ಪಳ ಅಭಿಯಾನದ ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರಿಕೆಟ್ ಟೂರ್ನಾಮೆಂಟ್ ಆಯೋಜಿಸಲಾಗಿತ್ತು. ಡಿಸಿ ಕಚೇರಿ ಮತ್ತು ಜಿಲ್ಲಾ ಪಂಚಾಯತ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ವಿಕಾಸ್ ಅವರು ಬ್ಯಾಟ್ ಹಿಡಿದು ಫೀಲ್ಡಿಗಿಳಿದು ಭರ್ಜರಿ ಬೌಂಡರಿ ಬಾರಿಸಿದರು. ಅಲ್ಲದೆ ಬೌಲಿಂಗ್ ಸಹ ಮಾಡಿದ ಡಿಸಿ ವಿಕಾಸ್ ಇತರ ನೌಕರರನ್ನು ಹುರಿದುಂಬಿಸಿದರು.
Last Updated : Feb 3, 2023, 8:21 PM IST