ಗುತ್ತಿಗೆ ಆಧಾರದ ಮೇಲೆ ನೇಮಕಾತಿ : ಅರ್ಜಿ ಸಲ್ಲಿಸಲು ಕಿ.ಮೀ.ಗಟ್ಟಲೇ ಸಾಲಾಗಿ ನಿಂತ ಉದ್ಯೋಗಾಕಾಂಕ್ಷಿಗಳು - ಅರ್ಜಿ ಸಲ್ಲಿಸಲು ಕಿಮೀ ಗಟ್ಟಲೇ ಸಾಲಿನಲ್ಲಿ ನಿಂತ ಉದ್ಯೋಗಾಕಾಂಕ್ಷಿಗಳು
🎬 Watch Now: Feature Video
ಕೊಪ್ಪಳ: ಜಿಲ್ಲೆಯ ಕುಕನೂರು ತಾಲೂಕಿನ ಭಾನಾಪುರ ಬಳಿ ಸ್ಥಾಪನೆಯಾಗುತ್ತಿರುವ ಏಕಸ್ ಕಂಪನಿಯ ಆಟಿಕ್ ಕ್ಲಸ್ಟರ್ ಕಾರ್ಖಾನೆಯಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಕುಕನೂರು ಎಪಿಎಂಸಿ ಆವರಣದಲ್ಲಿ ಅರ್ಜಿ ಸ್ವೀಕರಿಸಲಾಗುತ್ತಿದೆ. ಜಿಲ್ಲೆಯೂ ಸೇರಿದಂತೆ ವಿವಿಧ ಕಡೆಗಳಿಂದ ಸಾವಿರಾರು ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸಲು ಆಗಮಿಸಿದ್ದರು. ಸುಮಾರು 2000ಕ್ಕೂ ಹೆಚ್ಚು ಜನರು ಕಿ.ಮೀ.ಗಟ್ಟಲೇ ಉದ್ದದ ಸಾಲಿನಲ್ಲಿ ನಿಂತಿರುವುದು ಕಂಡು ಬಂತು. ಇದು ಜಿಲ್ಲೆಯಲ್ಲಿ ನಿರೂದ್ಯೋಗ ಸಮಸ್ಯೆ ಎಷ್ಟಿದೆ ಎಂಬುದನ್ನು ಸೂಚಿಸುವಂತಿತ್ತು.
Last Updated : Feb 3, 2023, 8:17 PM IST