ತುಮಕೂರು : ಪೆಟ್ರೋಲ್ ಬಂಕ್ನ ಅಂಡರ್ ಟ್ಯಾಂಕ್ಗೆ ಇಳಿದ ಇಬ್ಬರು ಸಾವು - ಈಟಿವಿ ಭಾರತ ಕನ್ನಡ
🎬 Watch Now: Feature Video
ತುಮಕೂರು : ಪೆಟ್ರೋಲ್ ಬಂಕ್ನ ಅಂಡರ್ ಟ್ಯಾಂಕ್ ಸ್ವಚ್ಛಗೊಳಿಸಲು ಇಳಿದ ಇಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ತಿಪಟೂರು ಪಟ್ಟಣದ ಹಿಂಡಿಸ್ಕೆರೆ ಗೇಟ್ ನಲ್ಲಿನ ಇಂಡೇನ್ ಪೆಟ್ರೋಲ್ ಬಂಕ್ ನಲ್ಲಿ ನಡೆದಿದೆ. ರವಿ(38) ಮತ್ತು ನಾಗರಾಜು(48) ಮೃತರು.
ಮೃತ ವ್ಯಕ್ತಿಗಳು ಪೆಟ್ರೋಲ್ ಬಂಕ್ ನ ಟ್ಯಾಂಕ್ನ್ನು ಸ್ವಚ್ಛಗೊಳಿಸಲು ಒಳಗಡೆ ಇಳಿದಿದ್ದರು. ಈ ವೇಳೆ ರವಿ ಮತ್ತು ನಾಗರಾಜುಗೆ ಯಾವುದೇ ಜೀವರಕ್ಷಕ ಉಪಕರಣ ನೀಡದೇ ಟ್ಯಾಂಕ್ ಒಳಗೆ ಇಳಿಸಲಾಗಿತ್ತು. ಟ್ಯಾಂಕ್ನಲ್ಲಿ ಆಕ್ಸಿಜನ್ ಇಲ್ಲದೆ ಅತಿಯಾದ ಕೆಮಿಕಲ್ ಸ್ಮೆಲ್ ನಿಂದ ಇಬ್ಬರು ಮೃತಪಟ್ಟಿರುವುದಾಗಿ ಎಂದು ಪೆಟ್ರೋಲ್ ಬಂಕ್ ಮಾಲೀಕ ಪ್ರಸನ್ನ ಕುಮಾರ್ ತಿಳಿಸಿದ್ದಾರೆ. ಈ ಸಂಬಂಧ ತಿಪಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಟ್ಯಾಂಕರ್ - ಕ್ಯಾಂಟರ್ ನಡುವೆ ಅಪಘಾತ: ಚಾಲಕನ ಎರಡೂ ಕಾಲುಗಳು ಕಟ್