Watch.. ಶ್ರೀನಗರದ ಲಾಲ್ಚೌಕ್ ಕ್ಲಾಕ್ ಟವರ್ ಮೇಲೆ ಹಾರಾಡಿದ ತ್ರಿವರ್ಣ ಧ್ವಜ - ಈಟಿವಿ ಭಾರತ ಕನ್ನಡ
🎬 Watch Now: Feature Video
ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): 74ನೇ ಗಣರಾಜ್ಯೋತ್ಸವ ನಿಮಿತ್ತ ಇಲ್ಲಿಯ ಲಾಲ್ಚೌಕ್ನಲ್ಲಿರುವ ಪ್ರಸಿದ್ದ ಕ್ಲಾಕ್ ಟವರ್ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಲಾಯಿತು. ಬಿಜೆಪಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶೋಕ್ ಕೌಲ್ ಲಾಲ್ಚೌಕ್ನಲ್ಲಿ ಧ್ವಜಾರೋಹಣವನ್ನು ನೆರವೇರಿಸಿದರು. ಮೈ ಕೊರೆಯುವ ಚಳಿಯ ನಡುವೆಯೂ ಧ್ವಜಾರೋಹಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗಿಯಾಗಿದ್ದರು.
ಇನ್ನು ಶ್ರೀನಗರದ ಶೇರ್ ಇ ಕಾಶ್ಮೀರ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿಯೂ ದ್ವಜರೋಹಣವನ್ನು ಆಚರಿಸಲಾಯಿತು. ಪೊಲೀಸ್ ಮತ್ತು ಸಿಆರ್‌ಪಿಎಫ್ ತುಕಡಿಗಳು ಮೈದಾನದಲ್ಲಿ ಪರೇಡ್ ನಡೆಸಿದವು. ಅಲ್ಲದೇ ಆಚರಣೆ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಭದ್ರತಾ ಪಡೆಗಳು ಮೈದಾನದ ಸುತ್ತಲು ಡ್ರೋನ್ಗಳ ಮೂಲಕ ನಿಗಾ ಇಟ್ಟಿದ್ದವು.
ಇದನ್ನೂ ಓದಿ: 74ನೇ ಗಣರಾಜ್ಯೋತ್ಸವ: ಇದೇ ಮೊದಲ ಬಾರಿಗೆ ತೃತೀಯ ಲಿಂಗಿಗಳ ಪಥ ಸಂಚಲನ
TAGGED:
74ನೇ ಗಣರಾಜ್ಯೋತ್ಸವ