ಬ್ರಾಹ್ಮಣತ್ವವನ್ನು ಯಾರು ಪಾಲಿಸುತ್ತಾರೋ ಅವರೇ ನಿಜ ಬ್ರಾಹ್ಮಣರು: ಶಾಸಕ ಡಿಸಿ ತಮ್ಮಣ್ಣ - ETV Bharat kannada News

🎬 Watch Now: Feature Video

thumbnail

By

Published : Feb 8, 2023, 11:32 AM IST

Updated : Feb 14, 2023, 11:34 AM IST

ಮಂಡ್ಯ : ಬ್ರಾಹ್ಮಣತ್ವವನ್ನು ಯಾರು ಪಾಲಿಸುತ್ತಾರೋ ಅವರೇ ನಿಜವಾದ ಬ್ರಾಹ್ಮಣರು ಎಂದು ಶಾಸಕ ಡಿ.ಸಿ ತಮ್ಮಣ್ಣ ತಿಳಿಸಿದರು. ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಯಾವುದೇ ಜಾತಿಯ ಬಗ್ಗೆ ಹೀನಾಯವಾಗಿ ಮಾತಾಡಬಾರದು ಎಂದರು. ಬ್ರಾಹ್ಮಣರು ಈ ದೇಶಕ್ಕೆ ಸಂಸ್ಕಾರ ಕೊಟ್ಟಿದ್ದಾರೆ. ಉತ್ತಮ ಗುಣಗಳನ್ನು ರೂಢಿಸಿಕೊಂಡು ಬ್ರಾಹ್ಮಣತ್ವ ಪಡೆದವರು. ಯಾವುದೇ ಜಾತಿಗೆ ಸೇರಿದ್ದರೂ ಆತ ಬ್ರಾಹ್ಮಣ ಎಂದು ಹೇಳಿದರು.

ಬ್ರಾಹ್ಮಣತ್ವ ಬೇರೆ ಬ್ರಾಹ್ಮಣ ಜಾತಿಯೇ ಬೇರೆ. ಕುಮಾರಸ್ವಾಮಿಯವರು ಯಾವ ಅರ್ಥದಲ್ಲಿ ಈ ಹೇಳಿಕೆ ನೀಡಿದ್ದಾರೆ ಎಂಬುದು ಗೊತ್ತಿಲ್ಲ ಎಂದರು. ನಾನಂತೂ ಬ್ರಾಹ್ಮಣರ ವಿರೋಧಿ ಅಲ್ವೇ ಅಲ್ಲ. ಜಾತಿ ವಿಚಾರಗಳ ಬಗ್ಗೆ ನಾವು ಕಡಿಮೆ ಮಾತನಾಡಬೇಕು. ನಾನು ಬ್ರಾಹ್ಮಣರ ಸಂಸ್ಕೃತಿಯನ್ನು ಬಹಳ ಇಷ್ಟಪಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ :ಹೇಳಿಕೆ ವಾಪಸ್​ ಪಡೆಯದಿದ್ದಲ್ಲಿ ಉಗ್ರ ಹೋರಾಟ: ಹೆಚ್​ಡಿಕೆಗೆ ಶಿವಾನಂದ ಮುತ್ತಣ್ಣವರ ವಾರ್ನಿಂಗ್​​

Last Updated : Feb 14, 2023, 11:34 AM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.