ಲಾಕ್ ಮಾಡಿಟ್ಟಿದ್ದ ಸ್ಪೋರ್ಟ್ಸ್ ಸೈಕಲ್ ಕದ್ದ ಕಳ್ಳರು: ಸಿಸಿಟಿವಿಯಲ್ಲಿ ಸೆರೆಯಾದ ಕಳ್ಳತನದ ದೃಶ್ಯ - etv bharat kannada
🎬 Watch Now: Feature Video
ಮುದ್ದೇಬಿಹಾಳ: ಮನೆಯಲ್ಲಿ ಲಾಕ್ ಮಾಡಿಟ್ಟಿದ್ದ ಸ್ಪೋರ್ಟ್ಸ್ ಸೈಕಲ್‌ವೊಂದನ್ನು ಕಳ್ಳರು ಕಳುವು ಮಾಡಿಕೊಂಡು ಪರಾರಿಯಾಗಿರುವ ಘಟನೆ ಹುಡ್ಕೋ ಬಡಾವಣೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಪಟ್ಟಣದ ಹುಡ್ಕೋ ಬಡಾವಣೆಯಲ್ಲಿ ಉದ್ಯಮಿ, ಪ್ರಥಮ ದರ್ಜೆ ಗುತ್ತಿಗೆದಾರ ಎಂಎನ್ ಮದರಿ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. 16ಸಾವಿರ ರೂ.ಮೌಲ್ಯದ ಸೈಕಲ್‌ನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ದೃಶ್ಯ ಮನೆಯಲ್ಲಿರುವ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಕುರಿತಂತೆ ಮಾತನಾಡಿದ ಗುತ್ತಿಗೆದಾರ ಎಂಎನ್ ಮದರಿ ಅವರು, ಮನೆಯಲ್ಲಿ ಕುಟುಂಬದ ಸದಸ್ಯರು ನಿದ್ದೆಯಲ್ಲಿದ್ದಾಗ ಈ ಘಟನೆ ನಡೆದಿದೆ. ರಾತ್ರಿ 11.30ರ ನಂತರ ಕಳ್ಳರು ಮನೆಯೊಳಗೆ ಬಂದಿದ್ದಾರೆ. ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದೇವೆ ಎಂದರು.
Last Updated : Feb 3, 2023, 8:38 PM IST