ಟ್ರ್ಯಾಕ್ಟರ್ ಟ್ರೈಲರ್ಗೆ ಶಾಲೆ ಬ್ಯಾಗ್ ತಗುಲಿ ವಿದ್ಯಾರ್ಥಿ ಸಾವು - ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತೇವರಟ್ಟಿ ಗ್ರಾಮ
🎬 Watch Now: Feature Video
ಚಿಕ್ಕೋಡಿ: ಚಿಕ್ಕಪ್ಪನ ಟ್ರ್ಯಾಕ್ಟರ್ ಗೆ ಅಣ್ಣನ ಮಗ ಸಿಲುಕಿ ಸ್ಥಳದಲ್ಲೇ ಸಾವು ಸಂಭವಿಸಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ತೇವರಟ್ಟಿ ಗ್ರಾಮದ ಸುದರ್ಶನ್ ಹಣಮಂತ ನೀಲಜಗಿ (7) ಮೃತ ದುರ್ದೈವಿ .
ತೋಟದ ಮನೆಯಿಂದ ಗ್ರಾಮದ ಶಾಲೆಗೆ ಸುದರ್ಶನ್ ಹಾಗೂ ಅವರ ಅಣ್ಣ, ಚಿಕ್ಕಪ್ಪನ ಟ್ರಾಕ್ಟರ್ ನಲ್ಲಿ ಪ್ರಯಾಣ ಬೆಳೆಸಿದ್ದಾರೆ. ನಂತರ ಶಾಲೆಗೆ ಬರುತ್ತಿದ್ದಂತೆ ಟ್ರ್ಯಾಕ್ಟರ್ ನಿಂದ ಇಳಿದು ಸಾಗುವಾಗ ಚಿಕ್ಕಪ್ಪ (ಚಾಲಕ) ಟ್ರಾಕ್ಟರ್ ಚಾಲನೆ ಮಾಡಿದ್ದಾರೆ. ಆಗ ಟ್ರಾಕ್ಟರ್ ಟ್ರೈಲರ್ಗೆ ಆಕಸ್ಮಿಕವಾಗಿ ಪುಸ್ತಕ ಬ್ಯಾಗ್ ತಗುಲಿ ಸುದರ್ಶನ್ ಚಕ್ರಕ್ಕೆ ಸಿಲುಕಿ ಸಾವು ಸಂಭವಿಸಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಆಡಿ ನಲಿದು ಕಣ್ಣು ಮುಂದೆ ಇರಬೇಕಾದ ಮುದ್ದಾದ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.
ಇದನ್ನೂ ಓದಿ : ಬೆಂಗಳೂರಿನ ಮಹಿಳೆ ಕೊಳ್ಳೇಗಾಲದಲ್ಲಿ ಶವವಾಗಿ ಪತ್ತೆ: ಜಜ್ಜಿದ ಮೊಬೈಲ್ ಮೂಲಕ ಗುರುತು ಪತ್ತೆ