ತಿಂಥಣಿ: ಕೈಲಾಸ ಕಟ್ಟೆಯಲ್ಲಿ ಕುಳಿತು ಗಾಂಜಾ ಸೇದಿದ ಸಾಧುಗಳು - ಗಾಂಜಾ ಸೇದಿ ಕೈಲಾಸ ಕಂಡ ಸಾಧುಗಳು
🎬 Watch Now: Feature Video
ಯಾದಗಿರಿ: ಕಲ್ಯಾಣ ಕರ್ನಾಟಕದ ಅತ್ಯಂತ ಸುಪ್ರಸಿದ್ಧ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಮೌನೇಶ್ವರ ಜಾತ್ರೆಯಲ್ಲಿ ಸಾಧುಗಳು ಕೈಲಾಸ ಕಟ್ಟೆಯಲ್ಲಿ ಕುಳಿತು ಗಾಂಜಾ ಸೇವಿಸಿದರು. ಮೌನೇಶ್ವರ ಜಾತ್ರೆಯಲ್ಲಿ ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಸೇರಿದಂತೆ ವಿವಿಧ ಕಡೆಯಿಂದ ಆಗಮಿಸಿದ ಸಾಧುಗಳು ಸಮಾಗಮವಾಗಿದ್ದು, ವಿಶೇಷವಾಗಿತ್ತು.
ಕೈಲಾಸ ಕಟ್ಟಿ ಮೇಲೆ ಕುಳಿತಿದ್ದ ಸಾಧುಗಳಿಗೆ ಭಕ್ತರು ಗಾಂಜಾ ನೀಡಿದರು. ಭಕ್ತರು ನೀಡಿದ ಗಾಂಜಾ ಸೇವಿಸಿ ಕೈಲಾಸದಲ್ಲಿ ಶಿವನನ್ನು ಕಾಣಲು ಯತ್ನಿಸಿದರು. ಇದೊಂದು ಪುಣ್ಯಭೂಮಿ, ಇಲ್ಲಿಗೆ ಸಾವಿರಾರು ಸಾಧುಗಳು ಬರುತ್ತಾರೆ. ಭಕ್ತರು ನೀಡುವ ಗಾಂಜಾವನ್ನು ಅವರು ಸೇವಿಸುತ್ತಾರೆ. ಸಾಧುಗಳಿಗೆ ಗಾಂಜಾ ಕೈಲಾಸ ಇದ್ದಂತೆ, ಗಾಂಜಾ ಸೇವಿಸಿ ಅದೇ ಗುಂಗಲ್ಲಿ ಮೈಮರೆತರು.
ಇದನ್ನೂ ಓದಿ : ಕೊಬ್ಬರಿ ಹೋರಿ 'ಮೈಸೂರು ಹುಲಿ' ಪುಣ್ಯತಿಥಿ: ಇಷ್ಟದ ಆಹಾರ ಸಮರ್ಪಿಸಿ ಪೂಜೆ