Watch.. ವೇಸ್ಟೇಜ್ ವಿಚಾರಕ್ಕೆ ಚಿನ್ನ ಬೆಳ್ಳಿ ಆಭರಣ ತಯಾರಕರ ನಡುವೆ ಮಾರಾಮಾರಿ - ಕಡಿಮೆ ವೇಸ್ಟೇಜ್ ದರದಲ್ಲಿ ಚಿನ್ನಾಭರಣ
🎬 Watch Now: Feature Video
ಮೈಸೂರು: ಚಿನ್ನ ಬೆಳ್ಳಿ ತಯಾರಿಕೆಯಲ್ಲಿ ಕಡಿಮೆ ವೇಸ್ಟೇಜ್ ಆಫರ್ ನೀಡಿದ ಅಂಗಡಿ ಮಾಲೀಕರ ಮೇಲೆ, ಇತರ ಅಂಗಡಿಗಳ ಚಿನ್ನ ಬೆಳ್ಳಿ ಆಭರಣ ತಯಾರಕರು ಹಲ್ಲೆ ಮಾಡಿರುವ ಘಟನೆ ಮೈಸೂರಿನ ಇರ್ವಿನ್ ರಸ್ತೆಯಲ್ಲಿ ನಡೆದಿದೆ. ಈ ಸಂಬಂಧ ನಗರದ ಲಷ್ಕರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಡಿಮೆ ವೇಸ್ಟೇಜ್ ದರದಲ್ಲಿ ಚಿನ್ನಾಭರಣಗಳನ್ನು ಮಾಡಿಕೊಡಲಾಗುವುದು ಎಂಬ ಜಾಹೀರಾತನ್ನು ಸಾಮಾನ್ಯವಾಗಿ ಚಿನ್ನದ ಅಂಗಡಿ ಮುಂದೆ ನೋಡಿರುತ್ತೇವೆ. ಆದರೆ, ಮೈಸೂರು ನಗರದ ಇರ್ವಿನ್ ರಸ್ತೆಯ ಚಿನ್ನ ಮತ್ತು ಬೆಳ್ಳಿ ತಯಾರಕರಾದ ನೂತನ್ ಎಂಬುವವರು ತಮ್ಮ ಅಂಗಡಿಯ ಮುಂದೆ ಕಡಿಮೆ ದರದಲ್ಲಿ ಚಿನ್ನಾಭರಣಗಳನ್ನು ಮಾಡಿಕೊಡಲಾಗುವುದು ಎಂದು ಬೋರ್ಡ್ ಹಾಕಿದ್ದು, ಇದನ್ನು ಇತರ ಚಿನ್ನ ಬೆಳ್ಳಿ ತಯಾರಕರು ಪ್ರಶ್ನಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಈ ಗಲಾಟೆಯಲ್ಲಿ ನೂತನ್, ಚೇತನ್, ಮನೋಜ್ ಎಂಬುವವರಿಗೆ ಗಾಯವಾಗಿದೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಗಲಾಟೆ ನಿಯಂತ್ರಿಸಿದ್ದಾರೆ.
ಇದನ್ನೂ ಓದಿ: ಬಾರ್ ಮಾಲೀಕನ ಮೇಲೆ ತೀವ್ರ ಹಲ್ಲೆ, ಸಿಸಿಟಿವಿಯಲ್ಲಿ ಸೆರೆ