ಪ್ಯಾಂಥರ್ ಬೃಹತ್ ಬೇಟೆ: ಕುದುರೆ ಜಾತಿಯ ನೀಲಗೈ ಕೊಂದ ಚಿರತೆ.. ವಿಡಿಯೋ - ಈಟಿವಿ ಭಾರತ ಕನ್ನಡ
🎬 Watch Now: Feature Video
ಜೈಪುರ(ರಾಜಸ್ಥಾನ): ಇಲ್ಲಿನ ಝಲಾನಾ ಚಿರತೆ ಮೀಸಲು ಪ್ರದೇಶದಲ್ಲಿ ಅದ್ಭುತ ದೃಶ್ಯ ಕಂಡು ಬಂದಿದೆ. ಚಿರತೆ ನೀಲಗೈಯನ್ನು ಬೇಟೆಯಾಡುವ ವಿಡಿಯೋವನ್ನು ಅರಣ್ಯ ಅಧಿಕಾರಿ ಒಬ್ಬರು ಹಂಚಿಕೊಂಡಿದ್ದಾರೆ. ಸುಮಾರು 15 ನಿಮಿಷಗಳ ಕಾಲ ಚಿರತೆ ಬೇಟೆ ಮಾಡುತ್ತದೆ. ಹೊಂಚು ಹಾಕಿ ಕುಳಿತಿದ್ದ ಚಿರತೆಯ ಬಾಯಿಗೆ ಬಿದ್ದ ನೀಲಗೈ ಪ್ರಾಣ ಉಳಿಸಿಕೊಳ್ಳಲು ಹೋರಾಡಿ ವಿಫಲವಾಗುತ್ತದೆ. 50 ರಿಂದ 60 ಕೆಜಿ ಇರುವ ಚಿರತೆ 200ಕ್ಕೂ ಹೆಚ್ಚು ತೂಕದ ನೀಲಗೈಯನ್ನು ಭೇಟೆಯಾಡಿದೆ.
Last Updated : Feb 3, 2023, 8:30 PM IST