ಆಕಸ್ಮಿಕ ಬೆಂಕಿಗೆ ಪೇಂಟ್ಸ್ ಅಂಗಡಿ ಧಗ ಧಗ.. ಲಕ್ಷಾಂತರ ರೂಪಾಯಿ ಹಾನಿ - ಅಗ್ನಿಶಾಮಕ ದಳ ಬೆಂಕಿಯನ್ನು ಹತೋಟಿಗೆ ತರಲು ಹರಸಾಹಸ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-17448453-thumbnail-3x2-bk.jpg)
ಕೊಡಗು ಜಿಲ್ಲೆ ಗೋಣಿಕೊಪ್ಪಲಿನ ಮುಖ್ಯರಸ್ತೆಯ ಬೈರು ಪೇಂಟ್ಸ್ ಅಂಗಡಿಗೆ ಮಂಗಳವಾರ ಬೆಳಗ್ಗೆ ಆಕಸ್ಮಿಕ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದೆ. ಇಡೀ ಕಟ್ಟಡವನ್ನು ಸಂಪೂರ್ಣವಾಗಿ ಬೆಂಕಿ ಆವರಿಸಿಕೊಂಡಿದ್ದು, ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಪೇಂಟ್ಸ್ ನಾಶವಾಗಿದೆ. ಸ್ಥಳೀಯರ ಮಾಹಿತಿ ಮೇರೆಗೆ ಆಗಮಿಸಿದ್ದ ಅಗ್ನಿಶಾಮಕ ದಳ ಹಾಗೂ ಪೊಲೀಸರು ಬೆಂಕಿಯನ್ನು ಹತೋಟಿಗೆ ತರಲು ಹರಸಾಹಸ ಪಟ್ಟರು. ಆದರೆ ಇಡೀ ಕಟ್ಟಡ ಬೆಂಕಿಯಿಂದ ಉರಿಯುತ್ತಿದ್ದು ನಂದಿಸಲು ತಕ್ಷಣಕ್ಕೆ ಸಾಧ್ಯವಾಗಿರಲಿಲ್ಲ.
Last Updated : Feb 3, 2023, 8:38 PM IST