ಭಗವಾನ್ ಶ್ರೀ ನಾಗಚಂದ್ರೇಶ್ವರ ದೇವಾಲಯದಲ್ಲಿ ವಿಶೇಷ ನಾಗರಪಂಚಮಿ ಆಚರಣೆ - ದೇಶದಾದ್ಯಂತ ನಾಗರ ಪಂಚಮಿ ಹಬ್ಬದ ಆಚರಣೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15989739-thumbnail-3x2-yyy.jpg)
ಉಜ್ಜೈನಿ ( ಮಧ್ಯಪ್ರದೇಶ ): ದೇಶದೆಲ್ಲೆಡೆ ನಾಗರಪಂಚಮಿ ಹಬ್ಬವನ್ನು ಅತ್ಯಂತ ಭಕ್ತಿಪೂರ್ವಕವಾಗಿ ಆಚರಿಸಲಾಗುತ್ತದೆ. ನಾಗರ ಪಂಚಮಿಯ ನಿಮಿತ್ತ ಉಜ್ಜೈನಿಯ ಮಹಾಕಾಳೇಶ್ವರ ದೇವಾಲಯದ ಮುಖ್ಯ ಶಿಖರದ ಮೂರನೇ ಭಾಗದಲ್ಲಿರುವ ಭಗವಾನ್ ಶ್ರೀ ನಾಗಚಂದ್ರೇಶ್ವರ ದೇವಾಲಯದ ಬಾಗಿಲನ್ನು ಸೋಮವಾರ ಮಧ್ಯರಾತ್ರಿ 12 ಗಂಟೆಗೆ ತೆರೆಯಲಾಗಿದೆ. ಈ ದೇವಾಲಯವು ವರ್ಷದಲ್ಲಿ ನಾಗಪಂಚಮಿಯ ದಿನದಂದು ಮಾತ್ರ 24 ಗಂಟೆಗಳ ಕಾಲ ತೆರೆದಿರುತ್ತದೆ. ಈ ದಿನ ನಾಗಚಂದ್ರೇಶ್ವರನಿಗೆ ವಿಶೇಷ ತ್ರಿಕಾಲ ಪೂಜೆ ನಡೆಯುತ್ತದೆ. ಇಂದು ಭಕ್ತರು ದೇವಾಲಯದ ಅಪರೂಪದ ವಿಗ್ರಹವನ್ನು ಕಣ್ತುಂಬಿಕೊಳ್ಳಬಹುದು. ಭಾರತೀಯ ಪಂಚಾಂಗದ ದಿನಾಂಕದ ಪ್ರಕಾರ, ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ದೇವಾಲಯದ ಬಾಗಿಲನ್ನು ತೆರೆಯುವ ಸಂಪ್ರದಾಯ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ.
Last Updated : Feb 3, 2023, 8:25 PM IST