ಪುಟಾಣಿ ಅಯ್ಯಪ್ಪ ಸ್ವಾಮಿಯ ಕೈ ಹಿಡಿದ ಮುಸ್ಲಿಂ ಅಜ್ಜ.. ಮತ ಸೌಹಾರ್ದತೆಗೆ ಸಾಕ್ಷಿಯಾಯಿತು ಈ ಕಾರ್ಯ..
🎬 Watch Now: Feature Video
ಕೋಮು ದ್ವೇಷಗಳು ಹೆಚ್ಚಾಗಿರುವ ಕರಾವಳಿಯಲ್ಲಿ ಅಯ್ಯಪ್ಪ ಮಾಲಾಧಾರಿ ಪುಟ್ಟ ಹಿಂದೂ ಬಾಲಕನೊಬ್ಬನ ಕೈ ಹಿಡಿದು ವೃದ್ಧ ಮುಸ್ಲಿಂ ವ್ಯಕ್ತಿಯೊಬ್ಬರು ನಡೆಯುತ್ತಿರುವ ದೃಶ್ಯಗಳು ಸುಳ್ಯದಲ್ಲಿ ಕಾಣಿಸಿದ್ದು, ಇದು ಜನ ಮೆಚ್ಚುಗೆಗೆ ಪಾತ್ರವಾಗಿದೆ. ಅಯ್ಯಪ್ಪ ಮಾಲಾಧಾರಿಯಾದ ರಕ್ಷಿತ್ ಎಂಬುವರ ಮಗ ನಾಲ್ಕು ವರ್ಷದ ಸೋನು ಎಂಬ ಬಾಲಕ ಈ ವರ್ಷ ಪ್ರಥಮವಾಗಿ ಶಬರಿಮಲೆಗೆ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಹೋಗಲು ಮಾಲೆ ಹಾಕಿದ್ದು, ಮಾಲೆ ಹಾಕಿದ ಕೂಡಲೇ ತನ್ನ ಪರಿಚಯದ ಸುಮಾರು 80 ವರ್ಷದ ಮುಸ್ಲಿಂ ಅಜ್ಜ ಸುಳ್ಯದ ಕಲ್ಲುಗುಂಡಿಯಲ್ಲಿ ಉದ್ಯಮಿಯಾಗಿರುವ ಇಬ್ರಾಹಿಂ ಎಂಬುವರ ಬಳಿಗೆ ಬಂದಿದ್ದಾನೆ. ಈ ಸಮಯದಲ್ಲಿ ವಾಹನ ಸಂಚಾರವಿದ್ದ ರಸ್ತೆ ದಾಟಲು ಕಷ್ಟಪಡುತ್ತಿದ್ದಾಗ ಇದನ್ನು ಗಮನಿಸಿದ ಇಬ್ರಾಹೀಂ ಅವರು ಬಾಲಕನನ್ನು ರಸ್ತೆ ದಾಟಿಸಿ ಮಾತನಾಡಿಸಿದರು. ಈ ಸಮಯದಲ್ಲಿ ಮಗು ತಾನು ಅಜ್ಜನನ್ನು ನೋಡಲು ಬಂದಿದ್ದಾಗಿ ಹೇಳಿದೆ. ಖುಷಿಗೊಂಡ ಇಬ್ರಾಹಿಂ ಅವರು ಮಗುವನ್ನು ಸಮೀಪದ ಹಣ್ಣಿನ ಅಂಗಡಿಗೆ ಕರೆದೊಯ್ದು ಹಣ್ಣುಹಂಪಲು ನೀಡಿ ಉಪಚರಿಸಿ ರಸ್ತೆ ದಾಟಿಸಿ ಕಳುಹಿಸಿ ಕೊಟ್ಟಿದ್ದಾರೆ.
Last Updated : Feb 3, 2023, 8:38 PM IST