ಕೂಲಿ ಕಾರ್ಮಿಕರ ಕೈ ಕಾಲು ಕಟ್ಟಿ ಗುತ್ತಿಗೆದಾರನಿಂದ ಅಮಾನುಷ ಥಳಿತ: ವಿಡಿಯೋ ನೋಡಿ - ಕೂಲಿ ಕಾರ್ಮಿಕರಿಗೆ ಥಳಿತ
🎬 Watch Now: Feature Video
ಮಹಾರಾಷ್ಟ್ರ: ಇಬ್ಬರು ಕೂಲಿ ಕಾರ್ಮಿಕರ ಕೈ ಕಾಲುಗಳನ್ನು ಕಟ್ಟಿ ಗುತ್ತಿಗೆದಾರನೊಬ್ಬ ಅಮಾನುಷವಾಗಿ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸೋಲಾಪುರ್-ಮಾದ ತಾಲೂಕಿನ ಭೂತಾಶ್ತೆ ಗ್ರಾಮದಲ್ಲಿ ಘಟನೆ ನಡೆದಿದೆ. ವಿಕಾಸ್ ನಾಯ್ಕವಾಡೆ, ಸೇವಕ್ ಕಸ್ಬೆ ಥಳಿತಕ್ಕೊಳಗಾದ ಕಾರ್ಮಿಕರು. ಈ ಕುರಿತು ಕಾರ್ಮಿಕನ ಪತ್ನಿ ಸೋನಾಲಿ ವಿಕಾಸ್ ನಾಯ್ಕವಾಡೆ ಮಾದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಬಾಲಾಜಿ ಮೋರೆ, ಬಾಲಚಂದ್ರ ಅನಂತ ಯಾದವ್ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಕೂಲಿ ಕಾರ್ಮಿಕರಿಗೆ ಥಳಿಸಿದ ವಿಡಿಯೋ ನೋಡಿ ಸಿಟ್ಟಿಗೆದ್ದ ಸಾರ್ವಜನಿಕರು ಭಾರಿ ಆಕ್ರೋಶ ವ್ಯಕಪಡಿಸುತ್ತಿದ್ದಾರೆ.
Last Updated : Feb 3, 2023, 8:27 PM IST