ಕೆಂಪೇಗೌಡ ವಿಮಾನ ನಿಲ್ದಾಣದ ಥೀಮ್ ಪಾರ್ಕ್ ದೃಶ್ಯ: ಗ್ರಾಫಿಕ್ಸ್ ನೋಟದಲ್ಲಿ.. - ಕೆಂಪೇಗೌಡ ವಿಮಾನ ನಿಲ್ದಾಣ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16712199-thumbnail-3x2-dcc.jpg)
ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆ ಹಾಗೂ ಥೀಮ್ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ. ನವೆಂಬರ್ 11 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಮೆ ಲೋಕಾರ್ಪಣೆ ಮಾಡುವರು. ನಾಡಪ್ರಭುವಿನ ಇತಿಹಾಸ, ಸಾಧನೆ ಮತ್ತು ಪರಂಪರೆ ಸಾರುವ ಥೀಮ್ ಪಾರ್ಕ್ ಕಾಮಗಾರಿ ಸಹ ವೇಗವಾಗಿ ನಡೆಯುತ್ತಿದೆ. ಥೀಮ್ ಪಾರ್ಕ್ ಮಧ್ಯದಲ್ಲಿ ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಗಮನ ಸೆಳೆಯುವಂತಿದೆ. ಥೀಮ್ ಪಾರ್ಕ್ ಹೇಗಿರುತ್ತೆ ಎಂಬ ದೃಶ್ಯವನ್ನು ಗ್ರಾಫಿಕ್ಸ್ ಕಲೆಯಲ್ಲಿ ಕಟ್ಟಿಕೊಡಲಾಗಿದೆ.
Last Updated : Feb 3, 2023, 8:29 PM IST