ಕೋಳಿ ಕಾಳಗದ ಜೂಜುಕೋರರು ಸಿಗದಿದ್ದಕ್ಕೆ ಮೂರು ಹುಂಜು ಬಂಧಿಸಿಟ್ಟ ಕಾರಟಗಿ ಪೊಲೀಸರು - ಕೋಳಿ ಕಾಳಗದ ಜೂಜಾಟ
🎬 Watch Now: Feature Video

ಕೊಪ್ಪಳ:ಕೋಳಿ ಕಾಳಗದ ಜೂಜಾಟದಲ್ಲಿ ತೊಡಗಿದ್ದ ಜೂಜುಕೋರರು ಸಿಗದಿದ್ದಕ್ಕೆ ಕೊನೆಗೆ ಆ ಸ್ಥಳದಲ್ಲಿ ಸಿಕ್ಕ ಮೂರು ಹುಂಜುಗಳನ್ನು ಕೊಪ್ಪಳ ಜಿಲ್ಲೆಯ ಕಾರಟಗಿ ಪೊಲೀಸ್ ಠಾಣೆ ಪೊಲೀಸರು ಬಂಧಿಸಿಟ್ಟಿರುವ ಘಟನೆ ಜರುಗಿದೆ. ಕಾರಟಗಿ ತಾಲೂಕು ಬಸಣ್ಣ ಕ್ಯಾಂಪ್ ನಲ್ಲಿ ಕೋಳಿ ಕಾಳಗದ ಜೂಜಾಟ ನಡೆದ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ. ಪೊಲೀಸರನ್ನು ಕಂಡೊಡನೆ ಜೂಜುಕೋರರೆಲ್ಲ ಬಿಟ್ಟು ಪರಾರಿ ಆಗಿದ್ದಾರೆ.
ಸದ್ಯ ಜೂಜುಕೋರರ 9 ಬೈಕ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅಲ್ಲಿದ್ದ ಮೂರು ಹುಂಜುಗಳನ್ನು ತಂದು ಬಂಧಿಖಾನೆಯಲ್ಲಿ ಬಂಧಿಸಿಟ್ಟಿದ್ದಾರೆ. ಪೊಲೀಸರ ಈ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂಓದಿ:ತುಮಕೂರು: ಸಂಕ್ರಾಂತಿ ಹಬ್ಬದಂದು ಮೊಲ ಬೇಟೆಯಾಡುವ ವಿಭಿನ್ನ ಆಚರಣೆ
Last Updated : Feb 3, 2023, 8:39 PM IST