ಹಲ್ಲಿನಿಂದಲೇ 165 ಕೆಜಿ ಭಾರದ ಸಿಮೆಂಟ್ ಕಲ್ಲು ಎತ್ತಿ ವಿಶ್ವದಾಖಲೆ!- ವಿಡಿಯೋ - ತ್ರಿಪುರಾದ ರಾಜಧಾನಿ ಅಗರ್ತಲಾ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/640-480-17702604-thumbnail-4x3-sanju.jpg)
ಕೈಮೂರ್ (ಬಿಹಾರ) : ಬಿಹಾರದ ಕೈಮೂರ್‌ನ 'ಹ್ಯಾಮರ್‌ಹೆಡ್ ಮ್ಯಾನ್' ಎಂದೇ ಜನಪ್ರಿಯರಾಗಿರುವ ಧರ್ಮೇಂದ್ರ ಕುಮಾರ್ ಅವರು ಹೊಸ ಹೊಸ ದಾಖಲೆಗಳನ್ನು ಮಾಡುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೇ ಇವರು ಭುಜದ ಮೇಲೆ ಬೈಕ್ ಎತ್ತಿಕೊಂಡು 100 ಮೀಟರ್ ಓಡಿ ವಿಶ್ವದಾಖಲೆ ಸೃಷ್ಟಿಸಿದ್ದರು. ಇದೀಗ ಹಲ್ಲಿನಿಂದಲೇ 165 ಕೆಜಿ ಭಾರದ ಸಿಮೆಂಟ್ ಕಲ್ಲು ಎತ್ತುವ ಮೂಲಕ ಮತ್ತೊಂದು ವಿನೂತನ ವಿಶ್ವದಾಖಲೆ ಮಾಡಿದ್ದಾರೆ. ಇಷ್ಟು ತೂಕದ ಕಲ್ಲನ್ನು 10 ಸೆಕೆಂಡುಗಳ ಕಾಲ ತಮ್ಮ ಹಲ್ಲುಗಳಿಂದ ಎತ್ತುವ ಮೂಲಕ ನೆರೆದಿದ್ದವರ ಹುಬ್ಬೇರಿಸಿದ್ದಾರೆ.
ತ್ರಿಪುರಾದ ರಾಜಧಾನಿ ಅಗರ್ತಲಾದಲ್ಲಿ ಧರ್ಮೇಂದ್ರ ಈ ದಾಖಲೆ ಮಾಡಿದರು. ಇಲ್ಲಿಯವರೆಗೆ 9 ವಿಶ್ವ ದಾಖಲೆ ಹೊಂದಿದ್ದಾರೆ. ತ್ರಿಪುರಾ ಸ್ಟೇಟ್ ರೈಫಲ್ಸ್‌ನಲ್ಲಿ ವಿಶೇಷಾಧಿಕಾರಿಯಾಗಿ ಇವರು ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ : ಪ್ರಾಣಾಯಾಮ: ಬರಿಗಣ್ಣಿನಲ್ಲಿ 42 ನಿಮಿಷ ಸೂರ್ಯನನ್ನು ನೋಡಿ ದಾಖಲೆ ಬರೆದ ಸಾಹಸಿ