ನಾಲ್ಕು ಲಕ್ಷ ಬಳೆಗಳಿಂದ ಕನಕದುರ್ಗಮ್ಮ ದೇವಿಗೆ ಅಲಂಕಾರ- ವಿಡಿಯೋ - Goddess Kanakadurgamma is decorated
🎬 Watch Now: Feature Video
ವಿಜಯವಾಡ: ಆಂಧ್ರಪ್ರದೇಶದ ಇಂದ್ರಕೀಲಾದ್ರಿಯಲ್ಲಿರುವ ಕನಕದುರ್ಗಮ್ಮ ದೇವಸ್ಥಾನ ಮತ್ತು ದೇವಿಯನ್ನು ಬಳೆಗಳಿಂದ ಅಲಂಕಾರ ಮಾಡಲಾಗಿದೆ. ಕಾರ್ತಿಕ ಮಾಸದ ಎರಡನೇ ದಿನದಂದು ಜಗನ್ ಮಾತೆಯನ್ನು ಬಳೆಗಳಿಂದ ಅಲಂಕರಿಸುವುದು ಇಲ್ಲಿನ ವಾಡಿಕೆ. ಸುಮಾರು ನಾಲ್ಕು ಲಕ್ಷ ಬಳೆಗಳನ್ನು ಬಳಸಿಕೊಂಡು ದೇವಿಗೆ ಸಿಂಗಾರ ಮಾಡಲಾಗಿದೆ. ಅಮ್ಮನವರ ಮೂಲವಿರಾಟ್ ಜೊತೆಗೆ ಇತರ ದೇವಾಲಯಗಳನ್ನು ವಿವಿಧ ಬಣ್ಣದ ಬಳೆಗಳಿಂದ ಅಲಂಕರಿಸಲಾಗಿದೆ. ಈ ಬಳೆಗಳನ್ನು ದಾನಿಗಳು ನೀಡಿದ್ದು, ವಿವಿಧ ಬಣ್ಣದ ಬಳೆಗಳ ಅಲಂಕಾರದಿಂದ ಕಂಗೊಳಿಸುತ್ತಿರುವ ದುರ್ಗಮ್ಮನ ದರ್ಶನಕ್ಕೆ ಮುಂಜಾನೆಯಿಂದಲೇ ಭಕ್ತರು ಆಗಮಿಸುತ್ತಿದ್ದಾರೆ.
Last Updated : Feb 3, 2023, 8:30 PM IST