ಪೆಟ್ರೋಲ್ ಹಾಕಿಸಿಕೊಳ್ಳಲು ಬಂದ ಕಾರಿನಲ್ಲಿ ದಿಢೀರ್ ಬೆಂಕಿ - ವಿಡಿಯೋ - ಔರಂಗಾಬಾದ್ನ ಪೆಟ್ರೋಲ್ ಪಂಪ್‌ನಲ್ಲಿ ಕಾರಿನ ಇಂಜಿನ್‌ನಲ್ಲಿ ಬೆಂಕಿ
🎬 Watch Now: Feature Video
ಔರಂಗಾಬಾದ್ನ ಫುಲ್ಬರಿ ತಾಲೂಕಿನ ಪಾಲಂ ಫಟಾದಲ್ಲಿ ಇಂಧನ ತುಂಬಿಸಲು ಬಂದ ಕಾರಿನ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪೆಟ್ರೋಲ್ ಪಂಪ್‌ನ ನೌಕರರು ಸಕಾಲದಲ್ಲಿ ಮುಂಜಾಗ್ರತೆ ವಹಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಮಂಗಳವಾರ ರಾತ್ರಿ ಪಾಲಂ ಫಟಾದಲ್ಲಿರುವ ಜೇ ಪೆಟ್ರೋಲಿಯಂ ಪಂಪ್‌ನಲ್ಲಿ ವ್ಯಕ್ತಿಯೊಬ್ಬರು ಫೋರ್ಡ್ ಕಾರ್ (MH20BN7329) ನಲ್ಲಿ ಬಂದರು. ಇಂಧನ ತುಂಬುತ್ತಿದ್ದಾಗ ಕಾರಿನ ಇಂಜಿನ್‌ನಲ್ಲಿ ಇದ್ದಕ್ಕಿದ್ದಂತೆ ಹೊಗೆ ಕಾಣಿಸಿಕೊಂಡಿತು. ಹೊಗೆ ಹೆಚ್ಚಿರುವುದನ್ನು ಚಾಲಕ ಹಾಗೂ ಪಂಪ್ ನಲ್ಲಿದ್ದ ಸಿಬ್ಬಂದಿ ಗಮನಿಸಿದ್ದಾರೆ. ಕೂಡಲೇ ಅಗ್ನಿಶಾಮಕ ಸಿಲಿಂಡರ್ ತೆಗೆದುಕೊಂಡು ಬೆಂಕಿ ನಂದಿಸಲು ಆರಂಭಿಸಿದರು. ಸಮಯಕ್ಕೆ ಸರಿಯಾಗಿ ಬೆಂಕಿ ನಂದಿಸಲಾಗಿದ್ದು, ಹೆಚ್ಚಿನ ಅನಾಹುತ ತಪ್ಪಿದೆ.
Last Updated : Feb 3, 2023, 8:24 PM IST