ಕಾಂಗ್ರೆಸ್ನವರು ಅಧಿಕಾರದ ಹಗಲುಗನಸು ಕಾಣುತ್ತಿದ್ದಾರೆ: ಬಿ.ಎಸ್.ಯಡಿಯೂರಪ್ಪ - ಈಟಿವಿ ಭಾರತ ಕನ್ನಡ
🎬 Watch Now: Feature Video
ಶಿವಮೊಗ್ಗ : ಕಾಂಗ್ರೆಸ್ನವರು ಅಧಿಕಾರದ ಹಗಲುಗನಸು ಕಾಣುತ್ತಿದ್ದಾರೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಕಾಂಗ್ರೆಸ್ ನಾಯಕರ ಕುರಿತು ವ್ಯಂಗ್ಯವಾಡಿದ್ದಾರೆ. ಜಿಲ್ಲೆಯ ವಿನೋಬನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ನಿಶ್ಚಿತವಾಗಿ ಅಧಿಕಾರಕ್ಕೆ ಬರುತ್ತದೆ. ನಮ್ಮೆಲ್ಲ ನಾಯಕರು ರಾಜ್ಯಾದ್ಯಂತ ಪ್ರವಾಸ ಆರಂಭ ಮಾಡಿದ್ದಾರೆ. ಫೆಬ್ರವರಿಯಲ್ಲಿ ನಡೆಯುವ ಅಧಿವೇಶನ ನಂತರ ಮತ್ತೆ ಪ್ರವಾಸ ಶುರು ಮಾಡುವುದಾಗಿ ಹೇಳಿದರು. ಇನ್ನು ಮಂಡ್ಯ ಭಾಗದಲ್ಲಿ ಅಮಿತ್ ಶಾ ಹೋಗಿ ಬಂದಿದ್ದಾರೆ. ಈಗ ಅನೇಕರು ಬಿಜೆಪಿ ಬರಲು ಸಿದ್ಧರಾಗಿದ್ದಾರೆ. ಹಲವರು ಪಕ್ಷಕ್ಕೆ ಬರುವುದರಿಂದ ನಮಗೆ ಬಹಳಷ್ಟು ಅನುಕೂಲ ಆಗಲಿದೆ ಎಂದರು.
ಸುಮಲತಾ ಬಿಜೆಪಿ ಸೇರ್ಪಡೆ ಕುರಿತು ಚರ್ಚೆ ಮಾಡಿಲ್ಲ : ಸಂಸದೆ ಸುಮಲತಾ ಬಿಜೆಪಿ ಸೇರ್ಪಡೆ ಕುರಿತು ಚರ್ಚೆ ಮಾಡಿಲ್ಲ. ಅವರ ಮನಸ್ಸಿನಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ಆದರೆ ಸುಮಲತಾರ ಬೆಂಬಲಿಗರು ಬಿಜೆಪಿಗೆ ಬರುತ್ತಿದ್ದಾರೆ. ಇದರ ಮುನ್ಸೂಚನೆಯನ್ನು ಅರ್ಥಮಾಡಿಕೊಳ್ಳಿ ಎಂದು ಪರೋಕ್ಷವಾಗಿ ಸುಮಲತಾ ಅವರು ಬಿಜೆಪಿ ಸೇರ್ಪಡೆಯ ಕುರಿತು ಸುಳಿವು ನೀಡಿದರು.
ಭಾರತ ಜೋಡೊ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ನಡೆಸಿದ ಭಾರತ್ ಜೋಡೊ ಕುರಿತು ಪ್ರತಿಕ್ರಿಯಿಸಿದ ಅವರು, ಭಾರತ್ ಜೋಡೋ ಯಾತ್ರೆ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ. ಅದರಿಂದ ಯಾವುದೇ ಲಾಭ ಇಲ್ಲ. ಅವರಲ್ಲಿ ನಾಯಕರೇ ಇಲ್ಲ. ರಾಹುಲ್ ಗಾಂಧಿಯನ್ನು ಯಾರು ನಾಯಕರು ಅಂತಾರೆ. ಅವರನ್ನು ಯಾರೂ ನಾಯಕ ಎಂದು ಒಪ್ಪಿಕೊಳ್ಳುವುದಿಲ್ಲ ಎಂದರು.
ಇದನ್ನೂ ಓದಿ : ನನ್ನ ಗಂಡನನ್ನು ಶಾಸಕನನ್ನಾಗಿ ಮಾಡು ದೇವರೇ.. ಬಿಜೆಪಿ ಅಭ್ಯರ್ಥಿ ಪತ್ನಿಯಿಂದ ಹರಕೆ