ಉಡುಪಿ: ಮಲ್ಪೆ ಕಡಲ ತೀರದಲ್ಲಿ ರಾಶಿ ರಾಶಿ ಬೂತಾಯಿ ಮೀನುಗಳು! - ಈಟಿವಿ ಭಾರತ್ ಕನ್ನಡ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16421712-thumbnail-3x2-vny.jpg)
ಉಡುಪಿ: ಮಲ್ಪೆಯ ತೊಟ್ಟಂ ಕಡಲತೀರದಲ್ಲಿ ಅಲೆಯೊಂದಿಗೆ ಕೊಚ್ಚಿಕೊಂಡು ಅಪಾರ ಪ್ರಮಾಣದ ಬೂತಾಯಿ ಮೀನುಗಳು ಹೊರ ಬಂದಿರುವ ಘಟನೆ ನಡೆದಿದೆ. ಸಮುದ್ರದಿಂದ ಹೊರ ಬಂದಿರುವ ಮೀನುಗಳನ್ನು ಜನರು ಮನೆಗೆ ಕೊಂಡೊಯ್ಯುತ್ತಿದ್ದಾರೆ. ಸಮುದ್ರದಲ್ಲಿ ಬೂತಾಯಿ ಮೀನುಗಳು ದೊಡ್ಡ ಪ್ರಮಾಣದ ಗುಂಪಿನಲ್ಲಿ ತಿರುಗಾಟ ನಡೆಸುತ್ತವೆ. ಕೆಲವೊಮ್ಮೆ ಪಥ ಬದಲಾಯಿಸಿ ಕಡಲ ತೀರದ ಹತ್ತಿರ ಬಂದಾಗ ಅಲೆಗಳಿಗೆ ಕೊಚ್ಚಿ ಹೊರಬರುವುದು ಸಾಮಾನ್ಯ ಎಂದು ಮೀನುಗಾರರು ತಿಳಿಸಿದ್ದಾರೆ.
Last Updated : Feb 3, 2023, 8:28 PM IST